»   » ಒರಟ ಪ್ರಶಾಂತ್, ಪೂಜಾಗಾಂಧಿ 'ಮಹರ್ಷಿ ಸಿದ್ಧ

ಒರಟ ಪ್ರಶಾಂತ್, ಪೂಜಾಗಾಂಧಿ 'ಮಹರ್ಷಿ ಸಿದ್ಧ

Subscribe to Filmibeat Kannada

ಖ್ಯಾತ ನಿರ್ದೇಶಕ ರಾಂಗೋಪಾಲ್ ವರ್ಮ ಅವರ ಬಳಿ ಸಹಾಯಕರಾಗಿದ್ದ ಕೃಷ್ಣಬ್ರಹ್ಮ ನಿರ್ದೇಶನದ ಮಹರ್ಷಿ ಚಿತ್ರಕ್ಕೆ ಪ್ರಥಮ ಪ್ರತಿ ಸಿದ್ಧವಾಗಿದ್ದು ಸದ್ಯದಲೇ ತೆರೆಯಮೇಲೆ ಬರಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಯುವಪೀಳಿಗೆಗೆ ಹಿಡಿಸುವ ಹಾಡುಗಳು ಹಾಗೂ ವಾತ್ಸಲ್ಯಭರಿತ ಸನ್ನಿವೇಶಗಳು ಮಹರ್ಷಿಯ ಮುಖ್ಯಾಂಶಗಳು. ಹಿಂದೆ ನಿಶ್ಚಿತಾರ್ಥ, ಕರ್ನಾಟಕ ಪೋಲೀಸ್, ರಂಗೇನಹಳ್ಳಿ ರಂಗೇಗೌಡ, ಯುಗಾದಿ, ಪಾಂಡುರಂಗವಿಠಲ ಚಿತ್ರಗಳನ್ನು ನಿರ್ಮಿಸಿದ್ದ ಡಿ.ಕೆ.ರಾಮಕೃಷ್ಣ ಈ ಚಿತ್ರವನ್ನು ಮಾನಸ ಚಿತ್ರ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಚಿದಾನಂದ್ ಸಹ ನಿರ್ಮಾಪಕರಾಗಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸಿ.ರಾಜಶೇಖರ್.

ಒರಟ ಐ ಲವ್ ಯೂ ಚಿತ್ರದ ಮುಖಾಂತರ ಚಿತ್ರರಂಗ ಪ್ರವೇಶಿಸಿದ್ದ ಪ್ರಶಾಂತ್ ಮಹರ್ಷಿಯ ನಾಯಕನಾದರೆ ಮುಂಗಾರುಮಳೆಯ ಪೂಜಾಗಾಂಧಿ ನಾಯಕಿಯಾಗಿದ್ದಾರೆ. ಪ್ರಿಯಾಂಕ, ಮುನಿ, ವಿಶ್ವ, ರಾಜಶೇಖರ್, ಸ್ವಸ್ತಿಕ್‌ಶಂಕರ್, ಸಿಮ್ರಾನ್, ಹರೀಶ್‌ರಾಯ್ ಮುಂತಾದವರು ಇವರೊಂದಿಗಿದ್ದಾರೆ.

ನಿರ್ದೇಶಕ ಕೃಷ್ಣಬ್ರಹ್ಮ ಅವರು ರಾಕೇಶ್ ಅವರೊಡಗೂಡಿ ಮಹರ್ಷಿಗೆ ಮಾತು ಬರೆದು ಚಿತ್ರಕತೆ ರಚಿಸಿದ್ದಾರೆ. ಶ್ರೀಮುರುಳಿ ಸಂಗೀತ, ರಮೇಶ್‌ಆಲ್‌ಬಾಯ್ ಛಾಯಾಗ್ರಹಣ, ಈಶ್ವರ್ ಸಂಕಲನ, ಇಸ್ಮಾಯಿಲ್ ಕಲೆ, ಫೈವ್ ಸ್ಟಾರ್ ಗಣೇಶ್ ನೃತ್ಯ, ಕೌರವ ವೆಂಕಟೇಶ್ ಸಾಹಸ, ಮೋಹನ್ ಕಲೆ, ಮೋಹನ್‌ಮಾಳಗಿ ಸಹ ನಿರ್ದೇಶನ, ಅನಿಲ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮಹರ್ಷಿ ಪ್ರಶಾಂತನ ಜತೆಯಲ್ಲಿ ಪೂಜಾಗಾಂಧಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada