»   » ಮಾಧ್ಯಮದ ಮುಂದೆ ಶೈಲೂ ಟೀಮ್ ಪ್ರದರ್ಶನ

ಮಾಧ್ಯಮದ ಮುಂದೆ ಶೈಲೂ ಟೀಮ್ ಪ್ರದರ್ಶನ

Posted By:
Subscribe to Filmibeat Kannada
<ul id="pagination-digg"><li class="next"><a href="/news/27-shailoo-movie-ganesh-s-narayan-k-manju-aid0172.html">Next »</a></li></ul>
Shailoo Movie
ನಿರ್ದೇಶಕ ಎಸ್ ನಾರಾಯಣ್ ಖುಷಿಯಾಗಿದ್ದಾರೆ. ಆರಂಭದ ಗಳಿಕೆಯಲ್ಲಿ ಶೈಲೂ ಸ್ವಲ್ಪ ಹಿಂದೆಬಿದ್ದರೂ ದಿನದಿನಕ್ಕೆ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ. ಮೊದಲ ವಾರದ ನಂತರ ಬಹಳಷ್ಟು ಬೇಗ ಗಳಿಕೆಯಲ್ಲಿ ಏರಿರುವುದು ಶೈಲೂ ಹೆಗ್ಗಳಿಕೆ. ಆರಂಭದಲ್ಲಿ ಕೇವಲ 45 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಶೈಲೂ ಈಗ ಆ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.

ಶೈಲೂ ಚಿತ್ರ ಯಶಸ್ವಿಯಾಗುತ್ತಿದ್ದಂತೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಇಡೀ ಟೀಮ್ ಭಾಗವಹಿಸಿತ್ತು. ಆಗಿನಿಂದ ಈಗಿನವರೆಗೂ ಹೊಸ ಹೊಸ ವಿಷಯಗಳು ಚಿತ್ರತಂಡದಿಂದ ಒಂದೊಂದಾಗಿ ಈಚೆ ಬರುತ್ತಿವೆ. ಈ ಯಶಸ್ಸಿಗೆ ಗಣೇಶ್ ಕಾರಣ ಎಂದು ಎಸ್ ನಾರಾಯಣ್ ಹೇಳುವುದು, ನಿರ್ದೆಶಕ ನಾರಾಯಣ್ ರೇ ಕಾರಣ ಎಂದು ಗಣೇಶ್ ಹೇಳುವುದು ನಡೆದೇ ಇತ್ತು. ಆದರೆ ತೆರೆಯ ಮೇಲೆ ಗಣೇಶ್ ಅಭಿನಯದಲ್ಲಿ ಶೇ. 100ರಷ್ಟು ಫಲಿತಾಂಶ ಪ್ರೇಕ್ಷಕರಿಗೆ ಕಾಣುತ್ತಿತ್ತು.

ಆಶ್ಚರ್ಯವೆಂದರೆ ಈ ಚಿತ್ರದ ಮಂಜನ ಪಾತ್ರದ ನೈಜತೆಗಾಗಿ ಗಣೇಶ್ ಎಷ್ಟು ಕಷ್ಟಪಟ್ಟಿದ್ದಾರೆಂದರೆ, ಎಷ್ಟೋ ಬಾರಿ ನನಗೆ ಕಣ್ಣಿಂದ ನೀರು ಹರಿದಿದೆ. ಗಣೇಶ್ ವೃತ್ತಿಪರತೆ ಇತರರಿಗೆ ಮಾದರಿ ಆಗಲಿದೆ. ಜೊತೆಗೆ ಗಣೇಶ್ ಗೆ ಸರಿಯಾದ ಸ್ಕ್ರಿಪ್ಟ್ ಹಾಗೂ ನಿರ್ದೆಶಕರು ಸಿಕ್ಕಿ ಆತ ಕನ್ನಡದ ಆಸ್ತಿಯಾಗಬೇಕು" ಎಂದಿದ್ದಾರೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/27-shailoo-movie-ganesh-s-narayan-k-manju-aid0172.html">Next »</a></li></ul>
English summary
Kannada Movie Shailoo became Hit. It will be the Box Office Hit, end of the year. Ganesh and S Narayan Magic attracted the audience.&#13; &#13;

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada