»   » ಚಿತ್ರಲೋಕದೊಳಗೆ ಹೊಸ ನಾಯಕ ಅಲೋಕ

ಚಿತ್ರಲೋಕದೊಳಗೆ ಹೊಸ ನಾಯಕ ಅಲೋಕ

Subscribe to Filmibeat Kannada

ಚಿತ್ರರಂಗದಲ್ಲಿ ವಂಶ ಕುಡಿಗಳು ಆಗಮನ ಹೊಸದೇನಲ್ಲ. ಇದೀಗ ಆ ಲಿಸ್ಟ್ ಗೆ ಮತ್ತೊಬ್ಬ ನಾಯಕ ನಟನ ಸೇರ್ಪಡೆಯಾಗಿದೆ. ಅನುಭವ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದ ಪ್ರತಿಭಾವಂತ ನಿರ್ದೇಶಕ ಕಾಶೀನಾಥ್ ಅವರ ಪುತ್ರ ಅಲೋಕ್ ಸದ್ದಿಲ್ಲದೇ ರಂಗ ಪ್ರವೇಶ ಮಾಡಿದ್ದಾನೆ. ಅಲೋಕ ನಾಯಕ ನಟನಾಗಿ ಅಭಿನಯಿಸಿರುವ ಬಾಜಿ ಚಿತ್ರ ಬಿಡುಗಡೆಗೆ ಕಾದು ಕುಳಿತಿದೆ.

ಕಾಶೀನಾಥ್ ಪ್ರತಿಭಾವಂತ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಗರಡಿಯಲ್ಲಿ ಬೆಳದಿರುವ ಉಪೇಂದ್ರ,ವಿ.ಮನೋಹರ್, ಸಾಧುಕೋಕಿಲ, ಸುನೀಲ್ ಕುಮಾರ್ ದೇಸಾಯಿ ಸೇರಿದಂತೆ ಅನೇಕ ನಾಯಕ ನಟರು, ತಾಂತ್ರಿಕ ಸಿಬ್ಬಂದಿಗಳು ಇಂದು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಹೊಸತನಕ್ಕೆ ಇನ್ನೊಂದು ಹೆಸರೆಂದರೆ ಕಾಶೀನಾಥ್ ಎಂದರೆ ಉತ್ಪ್ರೇಕ್ಷೆಯಲ್ಲ. ಆದರೆ ಅಪವಾದವೆಂದರೆ ಕಾಶೀನಾಥ್ ಅವರ ಹಸಿಬಿಸಿ ಚಿತ್ರಗಳನ್ನು ನಿರ್ಮಿಸುತ್ತಾರೆ ಎನ್ನುವ ಆರೋಪ ಕೂಡಾ ಅವರ ಮೇಲಿತ್ತು. ಅಂತಹ ತಜ್ಞರ ಪುತ್ರ ಅಲೋಕ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಾಗಿ ಆಖಾಡಕ್ಕಿಳಿದಿದ್ದಾರೆ. ನೀಳಕಾಯದ ಸುಂದರನನ್ನು ಕನ್ನಡ ಚಿತ್ರರಂಗ ಬೆಳಸುತ್ತಾ ಎನ್ನುವುದನ್ನು ಕಾಲ ನಿರ್ಧರಿಸಲಿದೆ.

ಇತ್ತೀಚಿನ ದಿನಗಲ್ಲಿ ಕನ್ನಡ ಚಿತ್ರರಂಗ ಅನೇಕ ಯುವ ನಟ-ನಟಿ, ತಾಂತ್ರಿಕ ವರ್ಗಗಳ ಸಮೂಹವನ್ನೇ ಕಂಡಿದೆ. ಅನೇಕರು ಯಶಸ್ವಿಯಾಗಿದ್ದಾರೆ. ಹಲವರು ಹೇಳಹೆಸರಿಲ್ಲದೇ ನಾಪತ್ತೆಯಾಗಿದ್ದಾರೆ. ಅದೃಷ್ಟ ಇಲ್ಲಿ ಮುಖ್ಯವಾಗಿದ್ದು, ಕಾಶೀನಾಥ್ ಪುತ್ರ ತಂದೆಯ ನೆರಳಿನಿಂದ ಆಚೆ ಬಂದು ಉತ್ತಮ ನಟ ಎಂದು ನಿರೂಪಿಸಬೇಕಾಗಿದೆ.ಹೆಚ್ಚು ಹೆಚ್ಚು ಅವಕಾಶಗಳು ದೊರೆಯಲಿ, ಅಲೋಕ ಉತ್ತಮ ನಟನಾಗಿ ಬೆಳಯಲಿ ಎನ್ನುವುದು ಕನ್ನಡಿಗರ ಹಾರೈಕೆಯಾಗಿದೆ.

(ದಟ್ಸ್ ಕನ್ನಡಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada