ಕೃಷ್ಣನ್ ಲವ್ ಸ್ಟೋರಿ ಶೀಘ್ರದಲ್ಲೆ ತೆರೆಗೆ

By Rajendra

ಅಜಯ್, ರಾಧಿಕಾಪಂಡಿತ್ ಜೋಡಿಯ, ಶಶಾಂಕ್ ನಿರ್ದೇಶನದ 'ಕೃಷ್ಣನ್ ಲವ್ ಸ್ಟೊರಿ' ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ವಿ.ಶ್ರೀಧರ್ ಸಾರಥ್ಯದಲ್ಲಿ ಹಿನ್ನಲೆ ಸಂಗೀತ ನೀಡಲಾಗುತ್ತಿದೆ. ಹಾಗೆಯೇ ಮುಂಬೈ ನಗರದ ಪ್ರಸಿದ್ಧ ಸ್ಟುಡಿಯೋದಲ್ಲಿ ಡಿ.ಟಿ.ಎಸ್, ಡಿ ಐ ತಂತ್ರಜ್ಞಾನ ಅಳವಡಿಸಲಾಗುತ್ತಿದೆ.

ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿಭಿನ್ನ ಪ್ರೇಮಕಥೆಯುಳ್ಳ ಈ ಚಿತ್ರ ಯುವಪೀಳಿಗೆಗೆ ಹತ್ತಿರವಾಗಲಿದೆ ಎಂದು ಶಶಾಂಕ್ ತಿಳಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ಧವಾಗಲಿದ್ದು ಮುಂದಿನ ತಿಂಗಳು ತೆರೆ ಕಾಣುವ ಸಾಧ್ಯತೆಯಿದೆ.

ಶ್ರೀವೆಂಕಟೇಶ್ವರ ಕೃಪ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್.ಕೆ.ಮೆಹ್ತ ಹಾಗೂ ಮೋಹನ್.ಜಿ.ನಾಯಕ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಯೋಗೀಶ್ ಹುಣಸೂರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಎಂ.ಎಲ್.ಪ್ರಸನ್ನ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮರ ಸಾಹಸವಿರುವ 'ಕೃಷ್ಣನ್ ಲವ್ ಸ್ಟೊರಿಗೆ ಸಿ.ಎಚ್.ಸುರೇಶ್ ಮತ್ತು ಲೋಕೇಶ್ ಆವರ ಸಹ ನಿರ್ಮಾಣವಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X