ಸಲ್ಮಾನ್ ಖಾನ್ ಜೊತೆ ಬೆಳಗಾವಿ ಬೆಡಗಿ ಲಕ್ಷ್ಮಿ ರೈ
ಕುಂದಾನಗರಿ ಬೆಳಗಾವಿಯ ಬೆಡಗಿ ಲಕ್ಷ್ಮಿ ರೈಗೆ ಅದೃಷ್ಟದ ಬಾಗಿಲು ದಿಢೀರ್ ಎಂದು ಓಪನ್ ಆಗಿದೆ. ಈಕೆ ಅಭಿನಯದ ಇತ್ತೀಚಿನ ತಮಿಳು, ತೆಲುಗಿನ ಕಾಂಚನಾ ಚಿತ್ರ ಯಶಸ್ವಿಯಾಗಿದ್ದೇ ಬಾಲಿವುಡ್ ಕಣ್ಣು ಈಕೆಯ ಮೇಲೆ ಬಿದ್ದಿದೆ. ಇನ್ನೇನು ಲಕ್ಷ್ಮಿ ರೈ ಅವರನ್ನು ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ ಬಾಲಿವುಡ್.
ಈಗ ಇದೇ ಕಾಂಚನಾ ಚಿತ್ರ ಹಿಂದಿಗೂ ರೀಮೇಕ್ ಆಗಲಿದೆ. ಚಿತ್ರದ ನಾಯಕ ನಟ ಯಾರು ಗೊತ್ತಾ. ಬಾಲಿವುಡ್‌ನ ಬ್ರಹ್ಮಚಾರಿ ಸಲ್ಮಾನ್ ಖಾನ್. ತೀರಾ ಇತ್ತೀಚೆಗೆ ಈ ಚಿತ್ರವನ್ನು ಸಲ್ಮಾನ್ ನೋಡಿ ಅಚ್ಚಾ ಹೈ. ಹಿಂದಿಯಲ್ಲೂ ಮಾಡೋಣ ಎಂದಿದ್ದಾರೆ. ಮೂಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ರಾಘವ ಲಾರೆನ್ಸ್ ಹಿಂದಿ ಚಿತ್ರಕ್ಕೂ ಅಡಿಯಿಡಲಿದ್ದಾರೆ.
ಲಕ್ಷ್ಮಿ ರೈ ಹಾಗೂ ರಾಘವ ಲಾರೆನ್ಸ್ ನಡುವಿನ ಕುಚ್ ಕುಚ್ ಸುದ್ದಿಗಳು ಇನ್ನೂ ಚಾಲ್ತಿಯಲ್ಲಿವೆ. ಇವರಿಬ್ಬರೂ ಈಗಾಗಲೆ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಕಾಂಚನಾ ಚಿತ್ರದಲ್ಲೂ ಇವರಿಬ್ಬರ ಜೈತ್ರಯಾತ್ರೆ ಮುಂದುವರಿಯುತ್ತಿದೆ. ಸಲ್ಲು ಏನೋ ಗ್ರೀನ್ ಸಿಗ್ನಲ್ ಕೊಟ್ಟಾಗಿ, ಆದರೆ ಲಕ್ಷ್ಮಿ ರೈ ಇನ್ನೂ ತುಟಿಪಿಟಕ್ ಎಂದಿಲ್ಲ. (ಏಜೆನ್ಸೀಸ್)


Click it and Unblock the Notifications











