ಕನಸಿನ ಕನ್ಯೆ ಹೇಮಾ ಮಾಲಿನಿ ಬಂಗಲೆಗೆ ನುಗ್ಗಿದ ಚಿರತೆ
ಕನಸಿನ ಕನ್ಯೆ ಹಾಗೂ ಸಂಸದೆ ಹೇಮಾ ಮಾಲಿನಿ ಅವರ ಮುಂಬೈ ಬಂಗಲೆಗೆ ಇಂದು ಬೆಳ್ಳಂಬೆಳಗ್ಗೆಯೇ (ಮೇ.27) ಚಿರತೆಯೊಂದು ನುಗ್ಗಿದೆ. ಈ ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಸಮೇತ ಹೇಮಾ ಮಾಲಿನಿ ಬಂಗಲೆಗೆ ದೌಡಾಯಿಸಿದ್ದಾರೆ.
ಚಿರತೆ ಬಂಗಲೆಗೆ ನುಗ್ಗಿದಾಗ ಹೇಮಾ ಮಾಲಿನಿ ಅವರು ಮನೆಯಲ್ಲಿ ಇರಲಿಲ್ಲ. ಮುಂಬೈನ ದಿನ್‌ದೋಷಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿವರಗಳು ತಕ್ಷಣಕ್ಕೆ ಲಭ್ಯವಿಲ್ಲ. ಮಹಾರಾಷ್ಟ್ರ ಅರಣ್ಯ ಸಚಿವ ಪತಂಗರಾವ್ ಕದಂ ಅವರು ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಈ ಪುಂಡ ಚಿರತೆ ಬಲೆಗೆ ಬಿತ್ತೋ ಇಲ್ಲವೋ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ. ಸಂಪೂರ್ಣ ವಿವರಗಳಿಗಾಗಿ ನಿರೀಕ್ಷಿಸಲಾಗಿದೆ.ಈ ಪುಂಡ ಚಿರತೆ ಹೇಮಾ ಮಾಲಿನಿ ಅವರ ಮನೆಗೆ ಯಾಕೆ ನುಗ್ಗಿತು ಎಂಬ ಸಂದೇಹ ಅವರ ಅಭಿಮಾನಿಗಳನ್ನು ಕಾಡುತ್ತಿದೆ. (ಪಿಟಿಐ)
English summary
A leopard strayed into actress-MP Hema Malini's bungalow in suburban Malad today (May 27), forest officials said. A team of forest officials have rushed to the spot, they said.


Click it and Unblock the Notifications