twitter
    For Quick Alerts
    ALLOW NOTIFICATIONS  
    For Daily Alerts

    ಮಲಯಾಳಂನಲ್ಲಿ ಮಕಾಡೆ ಮಲಗಿದ ಶಿಕಾರಿ ಚಿತ್ರ

    By Rajendra
    |

    ಭಾರಿ ನಿರೀಕ್ಷೆ ಹುಟ್ಟಿಸಿದ್ದ ಮಮ್ಮುಟ್ಟಿ ಅಭಿನಯದ 'ಶಿಕಾರಿ' ಚಿತ್ರಕ್ಕೆ ಮಲಯಾಳಂನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಮತ್ತು ಮಲಯಾಳಂನಲ್ಲಿ ಈ ಚಿತ್ರವನ್ನು ಏಕಕಾಲಕ್ಕೆ ನಿರ್ಮಿಸಲಾಗಿತ್ತು. ಮಾರ್ಚ್ 30ರಂದು ಕನ್ನಡದ ಶಿಕಾರಿ ಬಿಡುಗಡೆಯಾಗುತ್ತಿದೆ. ಮಲಯಾಳಂನಲ್ಲಿ ಚಿತ್ರ ಮಕಾಡೆ ಮಲಗಿರುವ ಕಾರಣ ಕನ್ನಡದಲ್ಲಿ ಹೇಗೋ ಏನೋ ಎಂಬ ಅನುಮಾನ ವ್ಯಕ್ತವಾಗಿದೆ.

    ಕನ್ನಡದ ಪ್ರೇಕ್ಷಕರು ಎಷ್ಟರ ಮಟ್ಟಿಗೆ ಈ ಚಿತ್ರವನ್ನು ಸ್ವೀಕರಿಸುತ್ತಾರೆ ಎಂಬ ಪ್ರಶ್ನೆ ತಲೆಯೆತ್ತಿದೆ. ಆದರೆ ಚಿತ್ರದ ನಿರ್ಮಾಪಕ ಕೆ ಮಂಜು ಮಾತ್ರ ಕನ್ನಡ ಪ್ರೇಕ್ಷಕರ ಮೇಲೆ ಅಖಂಡ ವಿಶ್ವಾಸವಿಟ್ಟಿದ್ದು, ಅವರು ತಮ್ಮನ್ನು ಕೈಬಿಡಲ್ಲ ಎಂಬ ನಂಬಿಕೆಯಲ್ಲಿದ್ದಾರೆ. ಕಾದು ನೋಡೋಣ ಏನಾಗುತ್ತದೋ.

    ಮಲಯಾಳಂ ಮಾಧ್ಯಮಗಳು 'ಶಿಕಾರಿ' ಚಿತ್ರವನ್ನು ಹಾಡಿಹೊಗಳಿದ್ದವು. ಆದರೆ ಪ್ರೇಕ್ಷಕರು ಮಾತ್ರ ಚಿತ್ರಕ್ಕೆ ಮುಖ ತಿರುವಿದ್ದಾರೆ. ಈ ಚಿತ್ರವನ್ನು ರು.4.5 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು ಮೊದಲ ವಾರದ ಕಲೆಕ್ಷನ್ ರು.60 ರಿಂದ 70 ಲಕ್ಷ ಇದೆ ಎನ್ನುತ್ತವೆ ಮೋಲಿವುಡ್ ಮೂಲಗಳು. ಈ ಲೆಕ್ಕಾಚಾರದ ಪ್ರಕಾರ ಚಿತ್ರಕ್ಕೆ ಹಾಕಿದ ಅಸಲು ಬರುವುದು ಕಷ್ಟ.

    ಕನ್ನಡದಲ್ಲೇ ಸ್ವತಃ ಡಬಿಂಗ್ ಹೇಳಿರುವ ಮಮ್ಮುಟ್ಟಿ ಕನ್ನಡ 'ಶಿಕಾರಿ' ಬಗ್ಗೆ ಆಶಾಭಾವ ವ್ಯಕ್ತಪಡಿಸಿದ್ದಾರೆ. ಮೈಸೂರು, ತೀರ್ಥಹಳ್ಳಿಯಲ್ಲಿ ಚಿತ್ರೀಕರಣ ನಡೆದದ್ದನ್ನು ನೆನೆಸಿಕೊಂಡಿರುವ ಅವರು, ಖಂಡಿತ ಈ ಚಿತ್ರ ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದಿದ್ದಾರೆ. ಒಟ್ಟಿನಲ್ಲಿ ಚಿತ್ರದ ನಿರ್ಮಾಪರು ದೇವರ ಮೇಲೆ ಭಾರ ಹಾಕಿದ್ದಾರೆ. (ಏಜೆನ್ಸೀಸ್)

    English summary
    Mammootty lead Malayalam movie Shikari doesn't make a significant mark at the box office. Mollywood sources says that, the movie fails to impress Malayalam audience
    Tuesday, March 27, 2012, 10:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X