ಮನಸಾರೆ ಚಿತ್ರದ ವಿಡಿಯೋ
ಈ ವರ್ಷದ ಬಹುನಿರೀಕ್ಷಿತ ಮತ್ತೊಂದು ಚಿತ್ರ ಮನಸಾರೆ. ಈ ಚಿತ್ರದ ಧ್ವನಿಸುರುಳಿ ಈಗಾಗಲೇ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ಯೋಗರಾಜ್ ಭಟ್ಟರು ಕರ್ನಾಟಕದ ನಯನ ಮನೋಹರ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ಐಂದ್ರಿತಾ ರೇ ಮತ್ತು ದಿಗಂತ್ ನಟನೆಯನ್ನು ಮನಸಾರೆ ಸವಿಯಬಹುದು ಎನ್ನುತ್ತದೆ ಚಿತ್ರ ತಂಡ. ಮನೋಮೂರ್ತಿ ಸಂಗೀತ ಸಂಯೋಜಿಸಿರುವ ಹಾಡುಗಳು, ಛಾಯಾಗ್ರಾಹಕ ಸತ್ಯ ಹೆಗಡೆ ಅವರ ಕ್ಯಾಮೆರಾ ಕೈಚಳಕ ಪ್ರೇಕ್ಷಕರಿಗೆ ಔತಣ. ಹಾಗಾಗಿ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಪ್ರೇಕ್ಷಕರು ಕಾತುರದಿಂದ ನಿರೀಕ್ಷಿಸುವಂತಾಗಿದೆ.
(ದಟ್ಸ್ ಕನ್ನಡ ವಿಡಿಯೋ)
ಯೋಗರಾಜ್ ಭಟ್ ವಿಡಿಯೋ ದಿಗಂತ್ ಮನೋಮೂರ್ತಿ diganth rockline venkatesh video andrita ray ರಾಕ್ ಲೈನ್ ವೆಂಕಟೇಶ್ ಮನಸಾರೆ yogaraj bhat mano murthy manasaare ಐಂದ್ರಿತಾ ರೇ


Click it and Unblock the Notifications