ಯುವ ಪ್ರೇಮಿಗಳ ಕಥೆಯಲ್ಲಿ ಕರಗಿದ ಮಣಿ

ತಮಿಳು ಚಿತ್ರರಂಗದ ನಟ ಕಾರ್ತಿಕ್ ಮಗ ಗೌತಮ್ ಹಾಗೂ ದಕ್ಷಿಣ ಭಾರತ ಚಿತ್ರರಂಗದ ತಾರೆ ರಾಧಾ ಅವರ ಎರಡನೇ ಮಗಳು ತುಳಸಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಜಿಗಿಯಲಿದ್ದಾರೆ.
ಕಾರ್ತಿಕ್ ಹಾಗೂ ರಾಧಾ ಅವರ ಜೋಡಿ ತಮಿಳು ಚಿತ್ರರಂಗದಲ್ಲಿ ಫೇಮಸ್ ಆಗಿತ್ತು. ಈಗ ಇವರ ಮಕ್ಕಳ ಸರದಿ.
ನಗರ ಕೇಂದ್ರಿತ ಚಿತ್ರಕಥೆ ಇದಾಗಿದ್ದು, ಕಾಸ್ಮೋಪಾಲಿಟನ್ ಸಂಸ್ಕೃತಿಯನ್ನು ತೆರೆಗೆ ತರಲು ಮಣಿ ಯತ್ನಿಸುತ್ತಿದ್ದಾರೆ. ಲಂಡನ್ ನಲ್ಲಿ ಬಹುತೇಕ ಚಿತ್ರೀಕರಣ ನಡೆಯುವ ಸಾಧ್ಯತೆಯಿದ್ದು, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರ ತೆರೆಗೆ ಬರಲಿದೆ.
ಮಣಿ ಟೀಮ್ ಗೆ ಮತ್ತೆ ಸಂತೋಷ್ ಶಿವನ್ ಕೆಮೆರಾ ಹಿಡಿದುಕೊಂಡು ಬಂದಿದ್ದಾರೆ. ಯುವ ಪ್ರೇಮಿಗಳ ಯುಗಳ ಗೀತೆಗೆ ಟ್ಯೂನ್ ಹಾಕಲು ಎಆರ್ ರೆಹಮಾನ್ ಸಿದ್ಧರಾಗಿದ್ದಾರೆ.
ಮಣಿ ಮುಂದಿನ ಚಿತ್ರಗಳು: ರಾವಣ್ ನಂತರ ಲಾಂಗ್ ಗ್ಯಾಪ್ ತೆಗೆದುಕೊಂಡ ಮಣಿ ' ಬ್ಲಡಿ ಪಾಕಿ' ಎಂಬ ಹಿಂದಿ ಸಾಹಸಭರಿತ ಚಿತ್ರಕ್ಕೆ ಕಥೆ ಹೆಣೆದಿದ್ದಾರೆ. ವಿವೇಕ್ ಒಬೆರಾಯ್ ಹಾಗೂ ಜೆನಿಲಿಯಾ ಮುಖ್ಯ ಭೂಮಿಕೆಯ ಈ ಚಿತ್ರ 2005ರ ಲಂಡನ್ ಉಗ್ರರ ದಾಳಿ, ಪಂಜಾಬಿಗರ ವಲಸೆ ಕುರಿತ ಕಥೆ ಹೊಂದಿದೆ.
ಇದಲ್ಲದೆ, ಅಮೀರ್ ಕರೀನಾ ಜೋಡಿಯ 'ಲಜ್ಜೋ', ಮಹೇಶ್ ಬಾಬು ಪ್ರಿಯಾಂಕಾ ಛೋಪ್ರಾ ಜೋಡಿಯಾ 'ವೀರುಡು', ವಿಜಯ್, ಮಹೇಶ್ ಬಾಬು, ಆರ್ಯ ಅಭಿನಯದ 'ಪೊನ್ನಿಯಿನ್ ಸೆಲ್ವನ್' ಎಂಬ ಚಾರಿತ್ರಿಕ ಚಿತ್ರಗಳು ಘೋಷಣೆಯಾಗಿದೆ.


Click it and Unblock the Notifications











