ಮದುವೆಯಾಗಲು ರೆಡಿಯಾದ್ರು ಮುಮೈತ್ ಖಾನ್
ಭಾರತೀಯ ಚಿತ್ರರಂಗಕ್ಕೆ ಸಿಕ್ಕ ಮತ್ತೊಬ್ಬ ಐಟಂ ಬೆಡಗಿಯರ ಸಾಲಿನಲ್ಲಿ ಪ್ರಮುಖವಾಗಿ ಎದ್ದು ಕಾಣುವ ಹೆಸರು ಮುಮೈತ್ ಖಾನ್. ನೋಡಲು ಮಲೆಯಾಳಂ 'ಭಾರ' ನಟಿ ಶಕೀಲಾ ತಂಗಿಯಂತಿರುವ ಮುಮೈತ್ ಖಾನ್ ಈಗ ಮದುವೆಯಾಗಲು ಮುಂದಾಗಿದ್ದಾರೆ. ವರಾನ್ವೇಷಣೆ ನಡೆಯುತ್ತಿದ್ದು ಸೂಕ್ತ ವರನಿಗಾಗಿ ಹುಡುಕಾಟ ನಡೆದಿದೆ ಎನ್ನುತ್ತವೆ ಮೂಲಗಳು.
ಸಿಲ್ಕ್ ಸ್ಮಿತಾ, ಡಿಸ್ಕೋ ಶಾಂತಿ, ಜ್ಯೋತಿಲಕ್ಷ್ಮಿಯಂತಹ ತಾರೆಗಳಿಲ್ಲದೆ ಬಳಲುತ್ತಿದ್ದ ಚಿತ್ರರಂಗಕ್ಕೆ ಹೊಸ ಹುರುಪು ತಂದವರು ಮುಮೈತ್ ಖಾನ್. ಇತ್ತೀಚೆಗೆ ಹೈದರಾಬಾದ್ ನಲ್ಲಿ ಪತ್ತೆಯಾದ ಮಾದಕದ್ರವ್ಯ ಜಾಲದಲ್ಲಿ ಈಕೆಯ ಹೆಸರು ಕೇಳಿಬಂದಿತ್ತು. ಆದರೆ ಮುಮೈತ್ ಖಾನ್ ಮಾತ್ರ ಇದನ್ನು ಸುತಾರಾಂ ಒಪ್ಪಲಿಲ್ಲ. ಎಲ್ಲಾ ಕಟ್ಟುಕತೆ ಅಂದರು.
ಅದೆಲ್ಲಾ ಹಳೆಯ ಕಥೆಯಾಯಿತು ಬಿಡ್ರಿ ಈಗ ಹೊಸ ಕಥೆ ಏನು ಹೇಳಿ ಅಂತೀರಾ? ಈಕೆಗೆ ಅವಕಾಶಗಳು ಈಗ ಅಷ್ಟಷ್ಟು ಮಾತ್ರವೆ. ಕೈಯಲ್ಲಿ ಸದ್ಯಕ್ಕೆ ಕೆಲಸವಿಲ್ಲ. ಕೇವಲ ವೇದಿಕೆಗಳಲ್ಲಿ ಕುಣಿದು ಕುಪ್ಪಳಿಸಿ ಪಡ್ಡೆಗಳ ಹೃದಯಕ್ಕೆ ಕಿಚ್ಚುಹಚ್ಚುವ ಕೆಲಸವಷ್ಟೆ ಆಕೆಯ ಕೈಯಲ್ಲಿರುವುದು. ಹಾಗಾಗಿ ತಾವು ಬೇಗ ಮದುವೆಯಾಗಿ ಸಂಸಾರ ಸಾಗರಕ್ಕೆ ಧುಮುಕಲು ತೀರ್ಮಾನಿಸಿದ್ದಾರೆ ಎನ್ನುತ್ತವೆ ಬಾಲಿವುಡ್ ಮೂಲಗಳು. ಅಂದಹಾಗೆ ದರ್ಶನ್ ಅಭಿನಯದ 'ಶೌರ್ಯ' ಚಿತ್ರದಲ್ಲಿ ಮುಮೈತ್ ಕುಣಿದು ಪಡ್ಡೆಗಳ ಹೃನ್ಮನ ತಣಿಸಿದ್ದರು.


Click it and Unblock the Notifications











