twitter
    For Quick Alerts
    ALLOW NOTIFICATIONS  
    For Daily Alerts

    ಬಾಲ್ಕನಿಯಲ್ಲಿ ಕೂತು ನೋಡಿ ದಸರಾ ಫಿಲಂ ಫೆಸ್ಟಿವಲ್

    By Rajendra
    |

    Bangarada Manushya
    ಈ ಬಾರಿಯ ದಸರಾ ಚಲನಚಿತ್ರೋತ್ಸವದಲ್ಲಿ 36 ಹಳೆಯ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಮೈಸೂರಿನ ಮೂರು ಚಿತ್ರಮಂದಿರಗಳಲ್ಲಿ ಈ ಚಿತ್ರಗಳನ್ನು ಕಣ್ತುಂಬಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸೆ.30ರಿಂದ ಒಟ್ಟು ಏಳು ದಿನಗಳ ಕಾಲ ನಡೆಯುವ ಚಿತ್ರೋತ್ಸವನ್ನು ನಟ ಕಮ್ ರಾಜಕಾರಣಿ ರೆಬಲ್ ಸ್ಟಾರ್ ಅಂಬರೀಷ್ ಉದ್ಘಾಟಿಸಲಿದ್ದಾರೆ.

    ಪ್ರದರ್ಶನ ಕಾಣಲಿರುವ ಬಹುತೇಕ ಚಿತ್ರಗಳು ಪ್ರಶಸ್ತಿ ಭಾಜನವಾಗಿರುವಂತಹವು. ವರನಟ ಡಾ.ರಾಜ್ ಕುಮಾರ್ ಅಭಿನಯದ ಭಬ್ರುವಾಹನ, ಕಿತ್ತೂರು ಚೆನ್ನಮ್ಮ, ಬಂಗಾರದ ಮನುಷ್ಯ ಸೇರಿದಂತೆ ಲೇಟೆಸ್ಟ್ ಚಿತ್ರ 'ಲೈಫು ಇಷ್ಟೇನೆ' ಚಿತ್ರವನ್ನೂ ನೋಡಬಹುದು.

    ಟಿಕೆಟ್ ದರ ಬಾಲ್ಕನಿಗೆ ರು.10 ಉಳಿದ ತರಗತಿಗಳಿಗೆ ಕೇವಲ ರು.5. ಮೈಸೂರಿನ ಲಿಡೋ, ಲಕ್ಷ್ಮಿ ಹಾಗೂ ಗೋಕುಲ್ ಚಿತ್ರಮಂದಿರಗಳಲ್ಲಿ ಈ ಚಿತ್ರಗಳನ್ನು ನೋಡಿ ಆನಂದಿಸಬಹುದು. ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಡಾಕ್ಯುಮೆಂಟರಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಚಲನಚಿತ್ರ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    More than 36 old Kannada films will be screened in three theatres in the city as part of Dasara. Actor-turned-politician Ambarish will inaugurate the seven-day Dasara Filmvoltsav at Kalamandira on September 30.
    Tuesday, September 27, 2011, 17:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X