»   » ನಂದಾ ಲವ್ ನಂದಿತಾ ಬೆಳ್ಳಿತೆರೆಗೆ ಬರಲು ಸಿದ್ಧ

ನಂದಾ ಲವ್ ನಂದಿತಾ ಬೆಳ್ಳಿತೆರೆಗೆ ಬರಲು ಸಿದ್ಧ

Subscribe to Filmibeat Kannada

ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದ ನಿರ್ಮಾಣದಲ್ಲಿ ಯೋಗಿಶ್ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿರುವ ನಂದಾ ಲವ್ ನಂದಿತಾ ಚಿತ್ರಕ್ಕೆ ಪ್ರಥಮಪ್ರತಿ ಸಿದ್ದವಾಗಿದ್ದು ಶೀಘ್ರದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ರಮೇಶ್‌ಕಶ್ಯಪ್ ತಿಳಿಸಿದ್ದಾರೆ. ದುನಿಯಾ ಚಿತ್ರದಲ್ಲಿ ಲೂಸ್ ಮಾದ ಪಾತ್ರದಲ್ಲಿ ಮಿಂಚಿದ್ದ ಹದಿಹರೆಯದ ನಾಯಕ ಯೋಗೀಶ್ ಈಗ ನಂದಾ ಲವ್ ನಂದಿತಾ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸಾಕಷ್ಟು ಭಾವನಾತ್ಮಕ ಕಥೆಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಅಜಯ್‌ಕುಮಾರ್ ಈ ಚಿತ್ರಕ್ಕೂ ಕಥೆ, ಚಿತ್ರಕಥೆ ರಚಿಸಿದ್ದಾರೆ. ಹಿಂದೆ ಗೆಜ್ಜೆನಾದ ಹಾಗೂ ಕನ್ನಡದ ಕಂದ ಚಿತ್ರಗಳನ್ನು ನಿರ್ದೇಶಿಸಿದ್ದ ವಿಜಯಕುಮಾರ್ ನಂದಾ ಲವ್ ನಂದಿತಾ ಚಿತ್ರದ ನಿರ್ದೇಶಕರಾಗಿದ್ದಾರೆ. ಎಮಿಲ್ ಸಂಗೀತ ನೀಡಿರುವ ಚಿತ್ರದ ಹಾಡುಗಳು ಈಗಾಗಲ್ಲೇ ಅಕ್ಷಯ ಆಡಿಯೋ ಮೂಲಕ ಬಿಡುಗಡೆಯಾಗಿದ್ದು ಕೇಳುಗರ ಮನದಲ್ಲಿ ಮನೆ ಮಾಡಿದೆ. ಮ್ಯಾಥ್ಯೂರಾಜನ್ ಛಾಯಾಗ್ರಹಣ, ಮಂಜು ಮಾಂಡವ್ಯ ಸಂಭಾಷಣೆ, ಡಿಫ಼ರೆಂಟ್‌ಡ್ಯಾನಿ ಸಾಹಸ, ಪ್ರಸಾದ್, ರಾಜೇಶ್ ಹಾಗೂ ಇಮ್ರಾನ್ ನೃತ್ಯ, ಕೆ.ಎಸ್.ಪ್ರಕಾಶ್ ಸಂಕಲನ, ಜಗದೀಶ್ ಮೈಸೂರ್ ಸಹನಿರ್ದೇಶನ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ನಂದಿತಾ, ಅವಿನಾಶ್, ಗಿರಿಜಾಲೋಕೇಶ್, ಸುರೇಶ್ಚಂದ್ರ, ಜೋಗಿನಾಗರಾಜ್, ಸಂಗೀತಾಶೆಟ್ಟಿ, ಶೋಭಾ, ರಮೇಶ್, ಡೈಮೆಂಡ್ ರಾಜಣ್ಣ, ಬೇಬಿ ನಿಖಿತ, ಮಾ:ಶ್ರೀನಿವಾಸಪ್ರಸಾದ್ ಮುಂತಾದವರಿದ್ದಾರೆ.

ನಂದಾ ಲವ್ ನಂದಿತಾ ಚಿತ್ರದ ವಾಲ್ ಪೇಪರ್ಸ್ ಗಾಗಿ ಕ್ಲಿಕ್ಕಿಸಿ

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada