ನರಸಿಂಹ ನಿರೀಕ್ಷೆಯಲ್ಲಿ ಕ್ರೇಜಿ ಅಭಿಮಾನಿಗಳು ಕಂಗಾಲು
ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ 'ನರಸಿಂಹ' ಚಿತ್ರ ಆಗ ಬಿಡುಗಡೆಯಾಗುತ್ತದೆ ಈಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕಾದದ್ದೇ ಬಂತು. ಕಡೆಗೂ ಆ ಚಿತ್ರಕ್ಕೆ ಬಿಡುಗಡೆ ಭಾಗ್ಯ ಲಭಿಸಿಲ್ಲ. ಚಿತ್ರ ಬಿಡುಗಡೆಯಾಗುತ್ತದೋ ಇಲ್ಲವೋ ಎಂದು ಕ್ರೇಜಿಮಾಮನ ಅಭಿಮಾನಿಗಳು ಕಂಗೆಟ್ಟಿದ್ದಾರೆ.
ನಟ, ನಿರ್ಮಾಪಕ, ನಿರ್ದೇಶಕ, ಗೀತ ರಚನೆಕಾರನಾಗಿ ಯಶಸ್ವಿಯಾಗಿರುವ ರವಿಚಂದ್ರನ್ ಮತ್ತೆ ತಮ್ಮ ಅಭಿನಯದ ಚಾತುರ್ಯವನ್ನು ತೋರಿಸಲು ನರಸಿಂಹನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 'ನರಸಿಂಹ' ಚಿತ್ರ ಸಂಪೂರ್ಣ ಸಿದ್ಧವಾಗಿದ್ದು ಕಾರಣಾಂತರಗಳಿಂದ ತೆರೆಗೆ ಬರಲು ವಿಳಂಬವಾಗುತ್ತಿದೆ.
ಈ ಚಿತ್ರದಲ್ಲಿ ರವಿಮಾಮನಿಗೆ ಜೊತೆಯಾಗಿ ಬಾಲಿವುಡ್ ತಾರೆ ನಿಖಿಷಾ ಪಟೇಲ್ ಅಭಿನಯಿಸಿದ್ದಾರೆ. ಮೋಹನ್ ನಿರ್ದೇಶನದ ಈ ಚಿತ್ರದ ಮೂಲಕ ಒಂದು ಕಾಲದ ಯಶಸ್ವಿ ಜೋಡಿ ಅನ್ನಿಸಿಕೊಂಡಿದ್ದ ಹಂಸಲೇಖ ಸಂಗೀತ ನೀಡಿದ್ದಾರೆ. ರವಿ ಅಭಿನಯದ ಕೆಲವು ಚಿತ್ರಗಳು ಬಾಕ್ಸಾಫೀಸಲ್ಲಿ ಲಗಾಟಿ ಹೊಡೆಯುತ್ತಿರುವ ಕಾರಣ ನಿರ್ಮಾಪಕರು, ವಿತರಕರು ರವಿ ಚಿತ್ರಗಳ ಕಡೆಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ. (ಏಜೆನ್ಸೀಸ್)


Click it and Unblock the Notifications











