ನಟಿ ರಕ್ಷಿತಾ ಪ್ರೇಮ್ ಎರಡನೇ ಇನ್ನಿಂಗ್ಸ್‌ಗೆ ಸಜ್ಜು
ಚಿತ್ರ ನಿರ್ಮಾಣದಲ್ಲಿ ಈಗಾಗಲೆ ಒಂದು ಕೈ ನೋಡಿರುವ ನಟಿ ರಕ್ಷಿತಾ ಈಗ ಮತ್ತೊಂದು ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. 'ಜೋಗಯ್ಯ'ನ ಮೇಲೆ ರು.10 ಕೋಟಿ ಬಂಡವಾಳ ಹೂಡಿ ಕೈಸೋತಿರುವ ರಕ್ಷಿತಾ ಈಗ ಎರಡನೇ ಇನ್ನಿಂಗ್ಸ್‌ಗೆ ಸಜ್ಜಾಗುತ್ತಿದ್ದಾರೆ. ಇದೊಂದು ಹಾರರ್ ಮತ್ತು ಕಾಮಿಡಿ ಪ್ರಧಾನ ಚಿತ್ರವಾಗಿದ್ದು ವಿವರಗಳು ಇನ್ನಷ್ಟೇ ಹೊರಬೀಳಬೇಕಾಗಿದೆ.
'ಜೋಗಯ್ಯ' ನಿರ್ಮಿಸಿದ್ದಾಯಿತು ಮುಂದೇನು? ಎಂಬ ಪ್ರಶ್ನೆಗೆ ಉತ್ತರಿಸಿರುವ ರಕ್ಷಿತಾ, ಹಾರರ್ ಚಿತ್ರ ಎಂದಿದ್ದಾರೆ. ಜೋಗಯ್ಯ ತಮ್ಮ ಚೊಚ್ಚಲ ಚಿತ್ರವಾಗಿದ್ದು ಈಗ ಎರಡನೇ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಕತೆ, ಚಿತ್ರಕತೆ ಏನು ಎತ್ತ ಎಂದರೆ ಸದ್ಯಕ್ಕೆ ಸುಳಿವು ಬಿಟ್ಟುಕೊಡುವ ಮೂಡ್‌ನಲ್ಲಿ ಇಲ್ಲ ರಕ್ಷಿತಾ. ಚಿತ್ರದನಿರ್ದೇಶನವನ್ನು ಪ್ರೇಮ್ ಅವರೇ ವಹಿಸಿಕೊಳ್ಳುತ್ತಾರಾ ಅಥವಾ ಇನ್ಯಾರ ಹೆಗಲಿಗಾದರೂ ಹಾಕುತ್ತಾರಾ ಎಂಬುದು ತಿಳಿಯಬೇಕಾದರೆ ಸ್ವಲ್ಪ ದಿನ ಕಾಯಬೇಕು. (ಏಜೆನ್ಸೀಸ್)
More from Filmibeat
English summary
Kannada actress Rakshita to produce one more movie in Kannada. Earlier she did Rs.10cr budget movie Jogayya. This time she wants to do horror movie.


Click it and Unblock the Notifications











