»   » ಆಪರೇಷನ್ ಅಂಕುಶ ಚಿತ್ರಕ್ಕೆ ಲಿಮ್ಕಾದಾಖಲೆ ಗೌರವ

ಆಪರೇಷನ್ ಅಂಕುಶ ಚಿತ್ರಕ್ಕೆ ಲಿಮ್ಕಾದಾಖಲೆ ಗೌರವ

Subscribe to Filmibeat Kannada

ಕನ್ನಡ ಚಲನಚಿತ್ರ ಆಪರೇಷನ್ ಅಂಕುಶ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. 2 ಗಂಟೆ 15 ನಿಮಿಷದ ಚಿತ್ರವನ್ನು ಮಡಿಕೇರಿ ಸಮೀಪದ ಮುಕೋಡ್ಲು ಗ್ರಾಮದ ಚಿಮ್ಮಿಪೂ ಎಸ್ಟೇಟ್ ಮನೆಯಲ್ಲಿನ ಹೊರಾಂಗಣದಲ್ಲಿ ಒಂದೇ ಕೋನ(angel)ದಲ್ಲಿ ಚಿತ್ರಿಸಲಾಗಿದೆ.

ಈ ಚಿತ್ರದಲ್ಲಿ ಅಳವಡಿಸಿರುವ ವಿಶೇಷ, ವಿನೂತನ, ಪ್ರಯೋಗ ಯಾವುದೇ ಭಾಷೆಯ ಚಿತ್ರದಲ್ಲೂ ಕಂಡುಬಂದಿಲ್ಲ. ಇತರೆ ಚಿತ್ರಗಳು 360 ಡಿಗ್ರಿ ಕೋನದಲ್ಲಿ ಕ್ಯಾಮೆರಾ ಮುಖಾಂತರ ಚಿತ್ರೀಕರಿಸಿದರೆ 'ಅಪರೇಷನ್ ಅಂಕುಶ' 180 ಡಿಗ್ರಿ ಕೋನದಲ್ಲಿ ಚಿತ್ರಿತವಾಗಿದೆ.

ಈ ಚಿತ್ರದಲ್ಲಿ 66 ದೃಶ್ಯಗಳು(scenes) ಮತ್ತು 610 ಶಾಟ್ಸ್ ಗಳಿದೆ. 2007 ಫೆ. 15 ರಂದು ಆರಂಭವಾದ ಚಿತ್ರೀಕರಣ 2007 ರ ಮಾರ್ಚ್ 6 ರಂದು ಮುಕ್ತಾಯಗೊಳಿಸಲಾಯಿತು ಎಂದುಚಿತ್ರದ ನಿರ್ಮಾಪಕ, ನಿರ್ದೇಶಕ ಎಚ್. ವಾಸುದೇವರಾವ್ ಸುದ್ದಿಗಾರರಿಗೆ ತಿಳಿಸಿದರು.
*****

ಚಿತ್ರಗಳ ಸ್ಥಿತಿಗತಿ
ಗಣೇಶ್ , ರೋಮಾ ಅಭಿನಯದ ಅರಮನೆ ನಗರ ಕೈಲಾಶ್ ಸೇರಿದಂತೆ ಹಲವುಚಿತ್ರಮಂದಿರಗಳಲ್ಲಿಯಶಸ್ವಿ 10 ನೇ ವಾರದಲ್ಲಿ ಸಾಗಿದೆ.ದರ್ಶನ್ ಅಭಿನಯದ ಮಾಸ್ ಚಿತ್ರ ಸಾಗರ್ ಚಿತ್ರಮಂದಿರ ಸೇರಿದಂತೆ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ 5 ನೇ ವಾರ ಪೂರೈಸಿದೆ.ಕಿಚ್ಚ ಸುದೀಪ್ , ರಮ್ಯಾ ಅಭಿನಯದ ಮುಸ್ಸಂಜೆ ಮಾತು ಆರಂಭಿಕ ಕುಸಿತದ ನಂತರ ಚೇತರಿಕೆ ಕಂಡು ತ್ರಿವೇಣಿಯಲ್ಲಿ 7 ವಾರ ಕಂಡಿದೆ. ಸುದೀಪ್ , ರಾಕ್ ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ನಟಿಸಿರುವ ಕಾಮಣ್ಣನ ಮಕ್ಕಳು 2 ವಾರ ಪೂರೈಸಿದೆ. ಸಂತೋಷ್ ಚಿತ್ರಮಂದಿರದಲ್ಲಿ ತುಂಬಿದ ಗೃಹ ಪ್ರದರ್ಶನ ಕಾಣುತ್ತಿದೆ.
(ದಟ್ಸ್ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada