»   » ಐಟಂ ರಾಣಿ ಸೋಫಿ ಚೌದರಿ ಕೊಬ್ಬು ಇಳಿಸಿದ ಪ್ರಭುದೇವ

ಐಟಂ ರಾಣಿ ಸೋಫಿ ಚೌದರಿ ಕೊಬ್ಬು ಇಳಿಸಿದ ಪ್ರಭುದೇವ

Posted By:
Subscribe to Filmibeat Kannada

ಬಾಲಿವುಡ್ ಬ್ಯೂಟಿ ಸೆಕ್ಸಿ ಸೋಫಿ ಚೌದರಿಗೆ ಮೂಳೆಯಿಲ್ಲದ ಮಾನವ ಎಂದೇ ಖ್ಯಾತನಾಗಿರುವ ಪ್ರಭುದೇವ ಅದು ಏನು ಮಾಡಿದನೋ ಏನೋ ಗೊತ್ತಿಲ್ಲ. ಸೋಫಿ ತೂಕ ಮಾತ್ರ ಐದು ಕೇಜಿಯಷ್ಟು ಕಡಿಮೆಯಾಗಿದೆ! ಸೋಫಿ ಬಾಲಿವುಡ್‌ನ ಸಾಕಷ್ಟು ಐಟಂ ಹಾಡುಗಳಲ್ಲಿ ಕುಣಿದಿದ್ದರೂ ಆಕೆಯ ತೂಕ ಮಾತ್ರ ಕಂಟ್ರೋಲಿಗೆ ಬಂದಿರಲಿಲ್ಲ.

ಸದ್ಯಕ್ಕೆ ತಮಿಳು ಚಿತ್ರವೊಂದರಲ್ಲಿ ಐಟಂ ಬೆಡಗಿಯಾಗಿ ಕುಣಿಯುತ್ತಿರುವ ಈಕೆ ಪ್ರಭುದೇವ ಡಾನ್ಸ್ ಡೈರೆಕ್ಟರ್ ಎಂಬ ಕಾರಣಕ್ಕೆ ಆ ಚಿತ್ರವನ್ನು ಒಪ್ಪಿಕೊಂಡಿದ್ದರಂತೆ. ಹಾಡಿನ ರಿಹರ್ಸಲ್‌ನಲ್ಲಿ ಸೋಫಿಗೆ ಪ್ರಭುದೇವ ಸರಿಯಾಗಿ ಬೆಂಡೆತ್ತಿದ್ದಾರೆ. ಒಂದೇ ದಿನದಲ್ಲಿ ಈಕೆ ಸುಸ್ತೋ ಸುಸ್ತಂತೆ.

ಇದೆಲ್ಲದರ ಫಲಿತಾಂಶ ಐದು ಕೇಜಿ ಕೊಬ್ಬು ಇಳಿದಿರುವುದು. ಪ್ರಭುದೇವ ಹೇಳಿಕೊಟ್ಟ ಕೆಲವೊಂದು ಸ್ಟೆಪ್ಸು ಈಕೆಗೆ ಸಖತ್ ಇಷ್ಟವಾಗಿದೆಯಂತೆ. ಇದೇ ಮೊದಲ ಬಾರಿಗೆ ಪ್ರಭು ನೃತ್ಯ ನಿರ್ದೇಶನದಲ್ಲಿ ಭಾರತೀಯ ದಿರಿಸಿನಲ್ಲಿ ಐಟಂ ಡಾನ್ಸ್ ಮಾಡಿರುವುದು ಚಿತ್ರದ ವಿಶೇಷಗಳಲ್ಲಿ ಒಂದಂತೆ. (ಏಜೆನ್ಸೀಸ್)

English summary
Sophie Choudry, who has shaken her legs for an item song in Vedi, believes that she has lost at least five kilos while performing for the dance. The actress has said that it is difficult to please Prabhu Deva.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada