ಬೆಳ್ಳಿತೆರೆಗೆ ಪ್ರಕಾಶ್ ರೈ ಸಹೋದರ ಪ್ರಸಾದ್ ರೈ ಎಂಟ್ರಿ!
ನೋಡಲು ಥೇಟ್ ನಮ್ಮ ಪ್ರಕಾಶ್ ರೈ ತಹವೇ ಇದ್ದಾರೆ. ಆದರೆ ಇವರು ಪ್ರಕಾಶ್ ರೈ ಅಲ್ಲ. ಅವರ ತಮ್ಮ ಪ್ರಸಾದ್ ರೈ. ಸಂತೋಷದ ಸಂಗತಿ ಏನೆಂದರೆ ಇವರು ಈಗ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ದುಃಖದ ಸಂಗತಿ ಎಂದರೆ ಇವರು ಬೆಳ್ಳಿತೆರೆಗೆ ಅಡಿಯಿಡುತ್ತಿರುವುದು ತಮಿಳು ಚಿತ್ರರಂಗದ ಮೂಲಕ. ಸಮಾಧಾನದ ಸಂಗತಿ ಅಂದ್ರೆ ಮುಂದೊಂದು ದಿನ ಕನ್ನಡಕ್ಕೂ ಬರಬಹುದು ಎಂಬ ನಿರೀಕ್ಷೆ!
ಇಬ್ಬರನ್ನೂ ಒಟ್ಟಿಗೆ ನಿಲ್ಲಿಸಿದರೆ ಅವಳಿ ಜವಳಿಗಳ ತರಹ ಕಾಣುತ್ತಾರೆ. ಇವರಲ್ಲಿ ಪ್ರಕಾಶ್ ರೈ ಯಾರೋ ಪ್ರಸಾದ್ ರೈ ಯಾರೋ ಎಂದು ಗಲಿಬಿಲಿಯಾಗುವಷ್ಟು ಇವರಿಬ್ಬರ ನಡುವೆ ಸಾಮತ್ಯೆ ಇದೆ. ಪ್ರಕಾಶ್ ರೈ ಹೇಗೆ ಬೆಳ್ಳಿತೆರೆಗೆ ಖಳನಟನಾಗಿ ಪ್ರವೇಶ ಪಡೆದರೋ ಇವರೂ ಹಾಗೆ ತಮಿಳಿನ "ಪಡೈ ಸೂಝಾ " ಚಿತ್ರದ ಮೂಲಕ ಈಗ ಎಂಟ್ರಿ ಕೊಡುತ್ತಿದ್ದಾರೆ.
"ನೋಡಲು ನಮ್ಮಣ್ಣ ಪ್ರಕಾಶ್ ನಂತೇ ಕಾಣುತ್ತೇನಾದರೂ ನನ್ನ ನಟನೆ ಮಾತ್ರ ತೀರಾ ಭಿನ್ನವಾಗಿರುತ್ತದೆ" ಎನ್ನುತ್ತಾರೆ ಪ್ರಸಾದ್ ರೈ. ಈ ಚಿತ್ರವನ್ನು ಎ ಎಸ್ ಪ್ರಭು ಎಂಬುವವರು ನಿರ್ದೇಶಿಸುತ್ತಿದ್ದಾರೆ. ಪ್ರಕಾಶ್ ಅವರ ಪ್ರಭಾವ ಪ್ರಸಾದ್ ಮೇಲೆ ಸಾಕಷ್ಟಿದೆ. ಆದರೂ ಪ್ರಸಾದ್ ಶೈಲಿ ಅವರ ಅಣ್ಣನ ಶೈಲಿಯನ್ನು ಎಲ್ಲೂ ಅನುಕರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications











