ಜೋಗಯ್ಯ ನಿರೀಕ್ಷೆಯಲ್ಲಿ ಸೆಂಟ್ರಲ್ ಜೈಲು ಹಕ್ಕಿಗಳು

By Rajendra

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳ ಬಳಗ ದೊಡ್ಡದು. ಅವರು ಎಲ್ಲಿ ಕಾಲಿಟ್ಟರೆ ಅಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಮೊನ್ನೆ ಪರಪ್ಪನ ಅಗ್ರಹಾರದಲ್ಲೂ ಹಾಗೆ ಆಯಿತು. ಶಿವಣ್ಣನನ್ನು ಕಂಡ ಜೈಲು ಹಕ್ಕಿಗಳು ಅವರನ್ನು ಸುತ್ತುವರಿದವು. ಜೋಗಯ್ಯ ಚಿತ್ರೀಕರಣಕ್ಕೆಂದು ಶಿವಣ್ಣ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟ ಸಂದರ್ಭವದು. ಶಿವಣ್ಣನನ್ನು ಕಂಡ ಕೈದಿಗಳು ಅವರನ್ನು ಅಡ್ಡಗಟ್ಟಿ ತಮ್ಮ ನೆಚ್ಚಿನ ನಾಯಕನಿಗೆ ಜೈಕಾರ ಕೂಗಿದರು.

"ಅಣ್ಣಾ 'ಜೋಗಯ್ಯ' ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ?" ಎಂದು ಕೇಳಿ ಪುಳಕಗೊಂಡರಂತೆ. ಪೆರೋಲ್ ಮೇಲೆ ಬಂದಾದರೂ ಜೋಗಯ್ಯ ನೋಡ್ತೀವಿ ಎಂದರಂತೆ. 'ಜೋಗಿ' ಸಖತ್ ಫೈಟ್ ಮಾಡಿದ್ದ. ಜೋಗಯ್ಯನೂ ಜೋರಾಗಿಯೇ ಇರ್ತಾನೆ" ಎಂದು ಕೇಳಿ ಚಿತ್ರದ ನಿರ್ದೇಶಕ ಪ್ರೇಮ್ ಅವರನ್ನು ತಬ್ಬಿಬ್ಬುಗೊಳಿಸಿದರಂತೆ.

'ಜೋಗಯ್ಯ' ನಿಮ್ಮ ಎಲ್ಲ ನಿರೀಕ್ಷೆಗಳನ್ನು ಮೀರಿ ಬರ್ತಾನೆ. ಅಲ್ಲಿವರೆಗೂ ತಾಳ್ಮೆಯಿಂದಿರಿ ಎಂದು ಪ್ರೇಮ್ ಹೇಳುವಷ್ಟರಲ್ಲಿ ಸುಸ್ತೋ ಸುಸ್ತಂತೆ. ಸದ್ಯಕ್ಕೆ 'ಜೋಗಯ್ಯ' ಚಿತ್ರೀಕರಣ ಶೇ.70ರಷ್ಟು ಮುಗಿದಿದೆ. ಕತ್ರಿಗುಪ್ಪೆಯಲ್ಲಿ ಭರ್ಜರಿ ಫೈಟ್ ಚಿತ್ರೀಕರಣ ನಡೆದಿದೆ. ನಾಗರಬಾವಿ, ವಿಧಾನ ಸೌಧ ಸುತ್ತಮುತ್ತಲೂ ಚಿತ್ರೀಕರಣ ನಡೆಯಲಿದೆ. ಜನವರಿಗೆ ಪ್ರೇಕ್ಷಕರ ಮುಂದೆ ಬರಲು ಜೋಗಯ್ಯ ಸಿದ್ಧತೆ ನಡೆಸಿದ್ದಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X