For Quick Alerts
  ALLOW NOTIFICATIONS  
  For Daily Alerts

  ಅಶೋಕ್ ಖೇಣಿಯನ್ನು ದಿಢೀರ್ ಭೇಟಿಯಾದ ರಜನಿಕಾಂತ್

  |

  ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕಳೆದ ಶುಕ್ರವಾರ, ಫೆಬ್ರವರಿ 24, 2012ರಂದು ಅಶೋಕ್ ಖೇಣಿಯವರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದಾರೆ. ಈ ದಿಢೀರ್ ಭೇಟಿಗೆ ಕಾರಣ, ಖೇಣಿ ನಿರ್ಮಾಣದ ಅರ್ಜುನ್ ಸರ್ಜಾ ನಟನೆಯ ಚಿತ್ರ 'ಪ್ರಸಾದ್'. ಇತ್ತೀಚಿಗೆ ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟ ಈ ಚಿತ್ರ ಸದ್ಯದಲ್ಲೇ ತೆರೆಕಾಣಬೇಕಾಗಿದೆ.

  ಭೇಟಿಯ ವೇಳೆಯಲ್ಲಿ ನಟ ರಜನಿಕಾಂತ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು. ಜೊತೆಗೆ ತುಂಬಾ ವರ್ಷಗಳಿಂದ ಆತ್ಮೀಯವಾಗಿರುವ ರಜನಿ ಮತ್ತು ಖೇಣಿ ಸಾಕಷ್ಟು ವಿಷಯಗಳನ್ನು ಪರಸ್ಪರ ಚರ್ಚಿಸಿದ್ದಾರೆ. ಈ ಭೇಟಿ ವೇಳೆ, ಖೇಣಿ ಚಿತ್ರ 'ಪ್ರಸಾದ್', ಯಶಸ್ವಿಯಾಗಲೆಂದು ರಜನಿ ಹಾರೈಸಿದ್ದಾರಂತೆ.

  ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಾಯಕತ್ವದ ಪ್ರಸಾದ್ ಚಿತ್ರದಲ್ಲಿ ನಾಯಕಿಯಾಗಿ ಮಾಧುರಿ ಭಟ್ಟಾಚಾರ್ಯ ನಟಿಸಿದ್ದಾರೆ. ಜೊತೆಗೆ 9 ವರ್ಷದ ಹುಡುಗ ಸಂಕಲ್ಪ್ ಕೂಡ ಇದ್ದಾನೆ. ಮನೋಜ್ ಸಾಥಿ ನಿರ್ದೇಶನದ ಈ ಚಿತ್ರಕ್ಕೆ ಇಳೆಯರಾಜಾ ಸಂಗೀತ ನೀಡಿದ್ದಾರೆ. ಒಟ್ಟಿನಲ್ಲಿ ರಜನಿ ಹಾಗೂ ಖೇಣಿ ಭೇಟಿ, ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ. (ಒನ್ ಇಂಡಿಯಾ ಕನ್ನಡ)

  English summary
  Superstar Rajinikanth met Industrialist Ashok Kheny on Friday, 24th February 2012, at his Bangalore residence. Rajinikanth wished Ashok Kheny for his upcoming production venture PRASAAD kannada film. And also, discussed about Rajini’s health status.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X