For Quick Alerts
  ALLOW NOTIFICATIONS  
  For Daily Alerts

  ರೆಬಲ್ ಸ್ಟಾರ್ ಅಂಬರೀಷ್ ಅವರ ಹೊಸ ಚಿತ್ರದ ಹೆಸರು ವಜ್ರ

  By Rajendra
  |

  ರೆಬಲ್ ಸ್ಟಾರ್ ಅಂಬರೀಷ್ ಈಗ ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. 'ವೀರ ಪರಂಪರೆ' ಬಳಿಕ ಅಂಬಿಯನ್ನು ಹುಡುಕಿಕೊಂಡು ಬಂದಿರುವ ಮತ್ತೊಂದು ಪ್ರಮುಖ ಪಾತ್ರವಿದು. ಚಿತ್ರದ ಹೆಸರು ಏನೆಂದರೆ ವಜ್ರ. ಸ್ವಯಂಕೃಷಿ ಎಂಬ ಮತ್ತೊಂದು ಚಿತ್ರದಲ್ಲೂ ಅಂಬಿ ಮುಖ್ಯಮಂತ್ರಿಯಾಗಿ ಅಭಿನಯಿಸುತ್ತಿದ್ದಾರೆ.

  ಅಂದಹಾಗೆ ವಜ್ರ ಪ್ರೇಮಾಕಥಾ ಹಂದರವುಳ್ಳ ಚಿತ್ರ. ಪ್ರೀತಿ ಯಾವಾಗಲು ವಜ್ರದಂತೆ ಹೊಳೆಯುತ್ತಿರುತ್ತದೆ ಎಂಬುದು ಚಿತ್ರದ ಸಾರಾಂಶ. ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಅರ್ಜುನ್. ಚಿತ್ರದ ಮೂರು ಹಾಡುಗಳ ರೀರೆಕಾರ್ಡಿಂಗ್ ಮುಗಿದಿದ್ದು ಇನ್ನೆರಡು ಹಾಡುಗಳ ರೀರೆಕಾರ್ಡಿಂಗ್ ನಡೆಯಬೇಕಾಗಿದೆ. ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎನ್ನುತ್ತಾರೆ ಅರ್ಜುನ್.

  ಒಟ್ಟು 18 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಮೈಸೂರಿನಲ್ಲಿ ಶೇ.80ರಷ್ಟು ಚಿತ್ರೀಕರಿಸಲಿದ್ದಾರೆ. ಉಳಿದ ಭಾಗದ ಚಿತ್ರೀಕರಣ ಮಂಗಳೂರು, ಬೆಂಗಳೂರು ಮತ್ತು ಮಂಡ್ಯದಲ್ಲಿ ನಡೆಯಲಿದೆ. ಚಿತ್ರದ ನಾಯಕ ನಟ ಜಯ ಪ್ರಸಾದ್ ನಾಯಕ. ಜೆನ್ನಿಫರ್ ಕೊತ್ವಾಲ್ ಚಿತ್ರದ ನಾಯಕಿ. ಸಾಧು ಕೋಕಿಲ, ರಂಗಾಯಣ ರಘು ತಾರಾಗಣವಿದೆ. ಸುಂದರನಾಥ ಸುವರ್ಣ ಅವರ ಸೋದರ ರವಿ ಸುವರ್ಣ ಅವರ ಛಾಯಾಗ್ರಹಣ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಶಿಷ್ಯ ಕಾಸ ವಸಿಷ್ಠ ಅವರ ಸಂಗೀತ ಚಿತ್ರಕ್ಕಿರುತ್ತದೆ.

  English summary
  Rebel Star Ambarish accepts to act in one more film titled as Vajra. The movie is directing by Arjun. Jennifer Kotwal and Jayaprasad Nayak are in lead. The shooting to be start from March. Ranghayana Raghu and Sadhu Kokila are others in cast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X