»   » ಸದಾಶಿವ ಬ್ರಹ್ಮಾವರ ಅವರಿಗೆ ನೆಲೆ ನೀಡಿದ ಸೈಕೊ

ಸದಾಶಿವ ಬ್ರಹ್ಮಾವರ ಅವರಿಗೆ ನೆಲೆ ನೀಡಿದ ಸೈಕೊ

Subscribe to Filmibeat Kannada

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರ ವ್ಯಥೆಯ ಬದುಕಿನ ಚಿತ್ರಣ ನೀಡಿದ ಹಾಯ್ ಬೆಂಗಳೂರು ಪತ್ರಿಕೆಯ' ಮೌನ ಮಾತಾಡಿದಾಗ' ಅಂಕಣ ಗಾಂಧಿನಗರದ ಮಂದಿಗೆ ತಲುಪಿತೋ ಇಲ್ಲವೋ ಗೊತ್ತಿಲ್ಲ. ಆದರೆ ಈಗಷ್ಟೇ ಚಿತ್ರ ಜಗತ್ತಿಗೆ ಕಾಲಿಡುತ್ತಿರುವ ಯುವ ನಿರ್ದೇಶಕ ದೇವದತ್ತ ಜೋಶಿಯ ಮನಸ್ಸನ್ನು ಕಲುಕಿಬಿಟ್ಟಿದ್ದಂತೂ ನಿಜ.ಅದರ ಪರಿಣಾಮ ನೆಲೆ ಇಲ್ಲದೆ ಸಂಕಷ್ಟ ಸ್ಥಿತಿಯಲ್ಲಿದ್ದ ಹಿರಿಯ ಜೀವಿಗೆ ಇಂದು ದೇವದತ್ತ ನೆಲೆ ನೀಡಿದ್ದಾರೆ. ಲೇಖಕ ಗಣೇಶ್ ಕಾಸರಗೋಡು ಹಾಗೂ ದೇವದತ್ತ ಅವರು ನಿಜಕ್ಕೂ ಅಭಿನಂದನಾರ್ಹರು.

ಗಣೇಶ್ ಕಾಸರಗೋಡ್ ಅವರ ಮನಕಲುಕುವ ಲೇಖನಗಳು ಈಗಾಗಲೇ ಓದುಗರಿಗೆ ಚಿರಪರಿಚಿತ. ಎಲೆಮರೆಯ ಕಾಯಿಯಂತೆ ಕಲಾ ಜೀವನವನ್ನು ಸವೆಸಿ, ಬೆಳ್ಳಿತೆರೆಯ ಮೇಲೆ ರಾಜನಂತೆ ಮೆರೆದವರು ದೀನ ಸ್ಥಿತಿಯಲ್ಲಿ ಬದುಕು ಸವೆಸುತ್ತಿರುವ ಹತ್ತು ಹಲವು ಉದಾಹರಣೆಗಳನ್ನು ಗಣೇಶ್ ನಾಡಿಗೆ ಪರಿಚಯಿಸಿದ್ದಾರೆ ಹಾಗೂ ಪರಿಚಯಿಸುತ್ತಿದ್ದಾರೆ. ಆದರೆ ಇದರಿಂದ ಪ್ರಭಾವಿತರಾಗಿ ಕಲಾವಿದರ ನೆರವಿಗೆ ಬಂದವರು ಮಾತ್ರ ಬೆರಳೆಣಿಕೆಯಷ್ಟು ಮಂದಿ ಮಾತ್ರ.

ಆದರೆ ಜೂನ್ 20 ರ ಹಾಯ್ ಬೆಂಗಳೂರು ಪತ್ರಿಕೆಯ 15 ನೇ ಪುಟದಲ್ಲಿ ಮೂಡಿದ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರ ಕಥೆ ಓದಿ ಯುವ ನಿರ್ದೇಶಕ ದೇವದತ್ತ ನೇರವಾಗಿ ಗಣೇಶ್ ಅವರನ್ನು ಸಂಪರ್ಕಿಸಿ, ಸದಾಶಿವ ಬ್ರಹ್ಮಾವರ ಅವರನ್ನು ತಮ್ಮ ಫ್ಲಾಟಿಗೆ ಕರೆದೊಯ್ದಿದ್ದಾರೆ. ಸೈಕೋ ಎಂಬ ವಿಚಿತ್ರ ಹೆಸರಿನ ಚಿತ್ರ ಮಾಡಲು ಹೊರಟಿರುವ ತಂತ್ರಜ್ಞಾನಿ ದೇವದತ್ತ, ಈ ಸುದ್ದಿಯ ಬಗ್ಗೆ ಹೆಚ್ಚು ಪ್ರಚಾರ ಅನಗತ್ಯ. ಅವರು ತಮ್ಮ ಕೊನೆಗಾಲವನ್ನು ಸುಖವಾಗಿ ಕಳೆಯುವಂತೆ ನೋಡಿಕೊಳ್ಳುವುದು ನನ್ನ ಉದ್ದೇಶ ಎಂದಿದ್ದಾರೆ.

ಹೆಂಡತಿಯನ್ನು ಕ್ಯಾನ್ಸರ್ ಮಾರಿಯಿಂದ ಕಳೆದುಕೊಂಡ ನಂತರ ಸ್ವಂತ ಮಗನಿಂದ ದೂರಾಗಿರುವ ಹಿರಿಯ ನಟ ಸದಾಶಿವ ಅವರಿಗೆ ಆಸರೆ ನೀಡಿದ ದೇವದತ್ತ ಅವರಂತಹ ಯುವಕರ ಸಂಖ್ಯೆ ಇನ್ನಷ್ಟು ವೃದ್ಧಿಸಲಿ.

(ಸುದ್ದಿಕೃಪೆ: ಚಿತ್ರತಾರ.ಕಾಂ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada