ಕನ್ನಡಕ್ಕೆ ಬರಲಾರೆ ಎಂದಿದ್ದ ವೀವೇಕ್ ಈಗ ಮಾರೀಚ

"ನಾನು ಹಾಗೂ ಮಿಥುನ್ ಕೆಲವು ವರ್ಷಗಳಿಂದ ಬೆಸ್ಟ್ ಫ್ರೆಂಡ್ಸ್. ಮಿಥುನ್, ಮಾರೀಚ ಚಿತ್ರದಲ್ಲಿ ಬಂದು ನಟಿಸಿ ಹೋಗುವಂತೆ ಕೇಳಿಕೊಂಡರು, ನಾನು ಒಪ್ಪಿಕೊಂಡೆ. ಇದಕ್ಕೆ ಕಾರಣ ಒಂದು ಮಿಥುನ್ ಸ್ನೇಹ, ಇನ್ನೊಂದು ಈ ನೆಪದಲ್ಲಿ ಕನ್ನಡ ಚಿತ್ರದಲ್ಲಿ ನಟನೆ. ನಿರ್ಮಾಪಕರು ಏನು ಕೊಡುತ್ತಾರೋ ಅದಕ್ಕೆ ನಟಿಸಲು ನಾನು ರೆಡಿ" ಎಂದಿದ್ದಾರೆ ವಿವೇಕ್. ಹೀಗೆ ತಮಿಳಿನ ಪ್ರಸಿದ್ಧ ನಟ ಕನ್ನಡದಲ್ಲೀಗ ಮಾರೀಚನಾಗಿದ್ದಾರೆ.
"ನಾನು ಕಾಸ್ಟ್ಲಿಯಲ್ಲ, ಫ್ರೆಂಡ್ಲಿ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿವೇಕ್, "ಸಾಕಷ್ಟು ವರ್ಷಗಳ ಹಿಂದೆಯೇ ಕನ್ನಡದಲ್ಲಿ ನಟಿಸಬೇಕಾಗಿತ್ತು. ಕಾರಣಾಂತರಗಳಿಂದ ನಟಿಸಲು ಸಾಧ್ಯವಾಗಿರಲಿಲ್ಲ" ಎಂದಿದ್ದಾರೆ. ಆದರೆ ಸ್ವಲ್ಪ ವರ್ಷಗಳ ಹಿಂದೆ ಇದೇ ವಿವೇಕ್, ಕನ್ನಡ ಚಿತ್ರದಲ್ಲಿ ನಾನು ನಟಿಸುವುದಿಲ್ಲ ಎಂದಿದ್ದರು. ಆದರೆ ಈಗ ಕಾಲ ಬದಲಾಗಿದೆ. ವೀವೇಕ್ ಎಂಬ ಹೆಸರಿಟ್ಟಿದ್ದಕ್ಕೋ ಏನೋ, ವಿವೇಕ್ ಗೆ 'ವಿವೇಕ' ಬಂದಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Tamil comedian vivek acts in kannada movie Maricha. The movie is Mithun Tejasvi movie and vivek is the best friend for Mithun.


Click it and Unblock the Notifications











