For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಬರಲಾರೆ ಎಂದಿದ್ದ ವೀವೇಕ್ ಈಗ ಮಾರೀಚ

  |

  ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಚಿತ್ರ 'ಮಾರೀಚ'ದಲ್ಲಿ ತಮಿಳು ಹಾಸ್ಯನಟ 'ವಿವೇಕ್' ಕಾಣಿಸಿಕೊಳ್ಳುತ್ತಿದ್ದಾರೆ. ಮಿಥುನ್ ತೇಜಸ್ವಿ ಚಿತ್ರ ಮಾರೀಚದಲ್ಲಿ ಮಿಥುನ್ ಆಹ್ವಾನವನ್ನು ಸ್ವೀಕರಿಸಿ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವ ವಿವೇಕ್, ಮಿಥುನ್ ರ ಬೆಸ್ಟ್ ಫ್ರೆಂಡ್ ಅಂತೆ. ಈ ಚಿತ್ರದಲ್ಲಿ ಇರುವ ಮೂರು ಪಾತ್ರಗಳಲ್ಲಿ, ನಾಯಕ, ನಾಯಕಿ ಹಾಗೂ ಇನ್ನೊಂದರಲ್ಲಿ ವಿವೇಕ್ ಪಾತ್ರವೂ ಒಂದು.

  "ನಾನು ಹಾಗೂ ಮಿಥುನ್ ಕೆಲವು ವರ್ಷಗಳಿಂದ ಬೆಸ್ಟ್ ಫ್ರೆಂಡ್ಸ್. ಮಿಥುನ್, ಮಾರೀಚ ಚಿತ್ರದಲ್ಲಿ ಬಂದು ನಟಿಸಿ ಹೋಗುವಂತೆ ಕೇಳಿಕೊಂಡರು, ನಾನು ಒಪ್ಪಿಕೊಂಡೆ. ಇದಕ್ಕೆ ಕಾರಣ ಒಂದು ಮಿಥುನ್ ಸ್ನೇಹ, ಇನ್ನೊಂದು ಈ ನೆಪದಲ್ಲಿ ಕನ್ನಡ ಚಿತ್ರದಲ್ಲಿ ನಟನೆ. ನಿರ್ಮಾಪಕರು ಏನು ಕೊಡುತ್ತಾರೋ ಅದಕ್ಕೆ ನಟಿಸಲು ನಾನು ರೆಡಿ" ಎಂದಿದ್ದಾರೆ ವಿವೇಕ್. ಹೀಗೆ ತಮಿಳಿನ ಪ್ರಸಿದ್ಧ ನಟ ಕನ್ನಡದಲ್ಲೀಗ ಮಾರೀಚನಾಗಿದ್ದಾರೆ.

  "ನಾನು ಕಾಸ್ಟ್ಲಿಯಲ್ಲ, ಫ್ರೆಂಡ್ಲಿ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿವೇಕ್, "ಸಾಕಷ್ಟು ವರ್ಷಗಳ ಹಿಂದೆಯೇ ಕನ್ನಡದಲ್ಲಿ ನಟಿಸಬೇಕಾಗಿತ್ತು. ಕಾರಣಾಂತರಗಳಿಂದ ನಟಿಸಲು ಸಾಧ್ಯವಾಗಿರಲಿಲ್ಲ" ಎಂದಿದ್ದಾರೆ. ಆದರೆ ಸ್ವಲ್ಪ ವರ್ಷಗಳ ಹಿಂದೆ ಇದೇ ವಿವೇಕ್, ಕನ್ನಡ ಚಿತ್ರದಲ್ಲಿ ನಾನು ನಟಿಸುವುದಿಲ್ಲ ಎಂದಿದ್ದರು. ಆದರೆ ಈಗ ಕಾಲ ಬದಲಾಗಿದೆ. ವೀವೇಕ್ ಎಂಬ ಹೆಸರಿಟ್ಟಿದ್ದಕ್ಕೋ ಏನೋ, ವಿವೇಕ್ ಗೆ 'ವಿವೇಕ' ಬಂದಿದೆ. (ಒನ್ ಇಂಡಿಯಾ ಕನ್ನಡ)

  English summary
  Tamil comedian vivek acts in kannada movie Maricha. The movie is Mithun Tejasvi movie and vivek is the best friend for Mithun.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X