ದಳವಾಯಿ ಮುದ್ದಣ್ಣನಾಗಿ ರಿಯಲ್ ಸ್ಟಾರ್ ಉಪೇಂದ್ರ

By Rajendra

ಸೂಪರ್ ಸ್ಟಾರ್ ರಜನಿಕಾಂತ್ ಮಾಡಬೇಕಿದ್ದ ಮಹತ್ವಾಕಾಂಕ್ಷಿ ಪಾತ್ರ ಹಾಗೂ ಪ್ರಕಾಶ್ ರೈ ಆಸೆಪಟ್ಟಿದ್ದ ಪಾತ್ರ ಉಪೇಂದ್ರ ಪಾಲಾಗಿದೆ. ಅದೇ 'ದಳವಾಯಿ ಮುದ್ದಣ್ಣ'. ರಜನಿಕಾಂತ್ ಈ ಪಾತ್ರ ಮಾಡಬೇಕು ಎಂದು ಕನಸು ಕಂಡಿದ್ದರು. ಪ್ರಕಾಶ್ ರೈ ಜೊತೆ ಟಿ ಎಸ್ ನಾಗಾಭರಣ ಒಂದು ಹಂತದ ಸಿದ್ಧತೆಯೂ ನಡೆಸಿದ್ದರು.

ಪಾತ್ರ ಹೇಗಿರಬೇಕು, ಅದಕ್ಕೆ ಬೇಕಾಗುವ ಕಾಸ್ಟ್ಯುಮ್ಸ್ ಬಗ್ಗೆಯೂ ಪ್ರಕಾಶ್ ರೈ ಜೊತೆ ನಾಗಾಭರಣ ಚರ್ಚಿಸಿದ್ದರು. ಕಾದಂಬರಿ ಆಧಾರಿತ ಚಿತ್ರ ಹಾಗೂ ಪೌರಾಣಿಕ ಪಾತ್ರವಾದ ಕಾರಣ ಈ ಚಿತ್ರದ ಬಗ್ಗೆ ಸುದೀರ್ಘ ಸಮಯದಿಂದ ಚರ್ಚೆ ನಡೆಯುತ್ತಿತ್ತು.

ಸದ್ಯಕ್ಕೆ ಸಿ ನಾರಾಯಣ್ ಅವರ ಬಳಿ ದಳವಾಯಿ ಮುದ್ದಣ್ಣ ಕಾದಂಬರಿ ಹಕ್ಕುಗಳಿವೆ. ಈ ಹಕ್ಕುಗಳನ್ನು ಪಡೆದು ಚಿತ್ರ ಮಾಡಲು ಕೌನ್ಸಿಲರ್ ಮುನಿರತ್ನ ನಾಯ್ಡು ಮುಂದಾಗಿದ್ದಾರೆ. ಟಿ ಎಸ್ ನಾಗಾಭರಣ ನಿರ್ದೇಶನದಲ್ಲಿ ಉಪೇಂದ್ರ ನಾಯಕ ನಟನಾಗಿ ಚಿತ್ರ ಶೀಘ್ರದಲ್ಲೆ ಸೆಟ್ಟೇರಲಿದೆ.

ಚಿತ್ರದುರ್ಗದ ರಕ್ತ ಸಿಕ್ತವಾದ ಇತಿಹಾಸದ ಚಿತ್ರಣದ ಕೊನೆಯ ಅಂಕವಾಗಿ ತ ರಾ ಸು ಅವರು 'ತಿರುಗುಬಾಣ' ಕಾದಂಬರಿಯನ್ನು ಬರೆದರು. ಈ ಕಾದಂಬರಿಯಲ್ಲಿ ದಳವಾಯಿ ಮುದ್ದಣ್ಣ ಮತ್ತು ಅವನ ತಮ್ಮಂದಿರ ಪತನವನ್ನು ಬಹು ಚೆನ್ನಾಗಿ ವಿವರಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Real Star Upendra to act as Dalavayi Muddanna by T S Nagabharana. Tamil superstar Rajinikanth wanted to do this role. Prakash Raj was all set to do the same. C Narayan who has the rights of the novel and he is getting in Upendra for the key role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X