ವಾಯುಪುತ್ರ ಚಿತ್ರದ ಟ್ರೈಲರ್
ದಕ್ಷಿಣ ಭಾರತದ ಪ್ರಸಿದ್ಧ ನಟ, ಕರುನಾಡ ಕುವರ ಅರ್ಜುನ್ ಸರ್ಜಾ ನಿರ್ಮಾಣದ 'ವಾಯುಪುತ್ರ" ಸೆಪ್ಟೆಂಬರ್ 3ರಂದು ತೆರೆಕಾಣಲಿದೆ. ಬೆಂಗಳೂರಿನಲ್ಲಿ ಪಿವಿಆರ್ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸರ್ಜಾ ಕುಟುಂಬದ ಮತ್ತೊಂದು ಕುಡಿ ಚಿರಂಜೀವಿ ಸರ್ಜಾ ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಹಿಂದೆ ಕೆಲವು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದ ಕಿಶೋರ್‌ಸರ್ಜಾ ಈ ಚಿತ್ರದ ನಿರ್ದೇಶಕರು. ಪ್ರಸ್ತುತ ಚಿತ್ರದ ಚಿತ್ರೀಕರಣ ಪೂರೈಸಿದ ಅವರು ನಂತರ ಇಹಲೋಕ ತ್ಯಜಿಸಿದ್ದು ಬೇಸರದ ಸಂಗತಿ. ವಿ.ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ 'ವಾಯುಪುತ್ರ"ಚಿತ್ರದ ಹಾಡುಗಳು ಜನ ಮನ್ನಣೆಗೆ ಪಾತ್ರವಾಗಿದೆ ಎಂದು ಆಕಾಶ್ ಆಡಿಯೋ ಸಂಸ್ಥೆ ಮಾಲೀಕರಾದ ಮಧುಬಂಗಾರಪ್ಪ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಿಡಿಯೋ)
ವಿಡಿಯೋ video ಅರ್ಜುನ್ ಸರ್ಜಾ ವಾಯುಪುತ್ರ arjun sarja vaayuputra ಚಿರಂಜೀವಿ ಸರ್ಜಾ chiranjeevi sarja ಕಿಶೋರ್ ಸರ್ಜಾ kishore sarja ಐಂದ್ರಿತಾ ರೇ vaayuputra trailer aindrita rai


Click it and Unblock the Notifications