For Quick Alerts
  ALLOW NOTIFICATIONS  
  For Daily Alerts

  ಯಶ್ ಜೋಶ್ ನಲ್ಲಿ ಭಟ್ಟರ ಡ್ರಾಮಾ; ಸದ್ಯಕ್ಕಿಲ್ಲ ವಿರಾಮ

  |

  ಪರಮಾತ್ಮ ಚಿತ್ರದ ನಂತರ ಯೋಗರಾಜ್ ಭಟ್ಟರು ನಿರ್ದೇಶಿಸುತ್ತಿರುವ ಸಿನಿಮಾ ಡ್ರಾಮಾ ತುಂಬಾ ವಿಭಿನ್ನವಾಗಿ ಮೂಡಿಬರುತ್ತಿದೆ ಎನ್ನಲಾಗಿದೆ. ಕಾರಣ, ಪರಮಾತ್ಚ ಚಿತ್ರ ಅದಕ್ಕೂ ಮೊದಲು ಬಂದಿದ್ದ ಭಟ್ಟರ ಅದೇ ಶೈಲಿಯಲ್ಲಿ ಇದ್ದದ್ದಕ್ಕೋ ಏನೋ, ಬಾಕ್ಸ್ ಆಫೀಸ್ ಗಳಿಕೆ ಓಕೆಯಾದರೂ ಪ್ರೇಕ್ಷಕರು ಅಷ್ಟೊಂದು ಇಷ್ಟಪಟ್ಟಿರಲಿಲ್ಲ. ಹಾಗಾಗಿ ಈ ಬಾರಿ ಭಟ್ಟರು ತೀರಾ ಭಿನ್ನವಾಗಿ ಯೋಚಿಸಿ 'ವಿಭಿನ್ನ' ಎನ್ನುವ ರೀತಿಯಲ್ಲಿ ಡ್ರಾಮಾ ಆಡಿಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

  ನಾಯಕ್ ಯಶ್ ಚಿತ್ರದಲ್ಲಿ ಸಿಕ್ಕಾಪಟ್ಟೆ ಹೊಡೆದಾಡಿದ್ದಾರೆ. ಭಟ್ಟರ ಈ ಹಿಂದಿನ 'ರಂಗ ಎಸ್ ಎಸ್ ಎಲ್ ಸಿ' ಯಂತೆ ಇದರಲ್ಲೂ ಸಾಕಷ್ಟು ಫೈಟ್ ಇದೆ. ಆದರೆ ಅದಕ್ಕಿಂತ ಹೆಚ್ಚು ಹಾಗೂ ಬೇರೆಯದೇ ಆದ ರೀತಿಯಲ್ಲಿ ಹೊಡೆದಾಟವನ್ನು ಅಳವಡಿಸಲಾಗಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಹೀಗೆ ಎಲ್ಲದರಲ್ಲೂ ವಿಭಿನ್ನತೆ ಧಾರಾಳವಾಗಿ ಗೋಚರಿಸುತ್ತಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ.

  ಈಗಾಗಲೇ ಮೊದಲ ಹಂತದ ಚಿತ್ರೀಕರಣ ಪೂರೈಸಿಯಾಗಿದೆ. ಎರಡನೇ ಹಂತ ಚಾಲ್ತಿಯಲ್ಲಿದ್ದು ಎರಡು ದಿನಗಳ ಚಿತ್ರೀಕರಣವನ್ನು ಅಂಬರೀಷ್ ಮುಗಿಸಿಕೊಟ್ಟಿದ್ದಾರೆ. ಪ್ರಕಾಶ್ ರೈ ಡ್ರಾಮಾ ತಂಡದ ಜೊತೆಯಲ್ಲೇ ಇದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣಕ್ಕೆ ಪ್ಯಾಕಪ್ ಘೋಷಣೆಯಾಗಲಿದೆ. ಮೂರು ತಿಂಗಳಲ್ಲಿ ಶೂಟಿಂಗ್ ಮತ್ತು ಪೋಸ್ಟ್ ಪ್ರಾಡಕ್ಷನ್ ಮುಗಿಸಿ ಚಿತ್ರವನ್ನು ತೆರೆಗೆ ತರಲಿದ್ದಾರೆ ಭಟ್ಟರು. (ಒನ್ ಇಂಡಿಯಾ ಕನ್ನಡ)

  English summary
  Yograj Bhat Upcoming Movie Drama Comleeted its first shedule of shooting. Now second shedule is going on. Yash Radhika Pandit Leaded this movie, coming out in Different Style Narration, as source is concerned.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X