»   » ಟಾಪ್‌-5 : ಹಣ ಗಳಿಕೆಯಲ್ಲಿ ‘ಮುಂಗಾರು ಮಳೆ’ ಫಸ್ಟು!

ಟಾಪ್‌-5 : ಹಣ ಗಳಿಕೆಯಲ್ಲಿ ‘ಮುಂಗಾರು ಮಳೆ’ ಫಸ್ಟು!

Posted By: Super
Subscribe to Filmibeat Kannada

ಬಾಕ್ಸಾಫೀಸ್‌ ರಿವ್ಯೂ ಪ್ರಕಾರ, 'ನೀಲಕಂಠ"ನ ಜನಪ್ರಿಯತೆ ಕುಸಿದಿದೆ, 'ಸಿರಿವಂತ"ನ ಅದೃಷ್ಟ ಚೆನ್ನಾಗಿದೆ!

  1. ಮುಂಗಾರು ಮಳೆ : ಗಣೇಶನ ಮುಗುಳ್ನಗೆ, ಯೋಗರಾಜ ಭಟ್ಟರ ನಿರೂಪಣೆ, ಎಸ್‌. ಕೃಷ್ಣರ ಅದ್ಭುತ ಛಾಯಾಗ್ರಹಣ, ಮನೋಮೂರ್ತಿಯವರ ಸುಮಧುರ ಸಂಗೀತದ ಮಳೆಯಲ್ಲಿ ಜನರು ನೆನೆಯುತ್ತಾ , ಚಿತ್ರದ ಯಶಸ್ಸಿಗೆ ಕಾರಣರಾಗಿದ್ದಾರೆ. 'ಅಪ್ತಮಿತ್ರ" ಸೇರಿದಂತೆ ಇನ್ನಿತರ ಚಿತ್ರಗಳ ಬಾಕ್ಸಾಫೀಸ್‌ ದಾಖಲೆಗಳು 'ಮುಂಗಾರು ಮಳೆ"ಗೆ ಕೊಚ್ಚಿ ಹೋಗುವ ಸಂಭವವಿದೆ. ಚಿತ್ರರಂಗಕ್ಕೆ ತಂಪಾದ ಮಳೆ ನೀಡಿ, ಚಿತ್ರದ ನಿರ್ಮಾಪಕರು ಈಗಾಗಲೇ ಒಂದೂವರೆ ಕೋಟಿ ರೂ. ಗಳಿಸಿದ್ದಾರೆ.


  2. 'ಜೊತೆಜೊತೆಯಲಿ" : ಸಾಮಾನ್ಯವಾಗಿ ನೂರು ದಿನ ಪೂರೈಸಿದ ನಂತರ ಚಿತ್ರಗಳು ಗಳಿಕೆಯಲ್ಲಿ ಹಿಂದೆ ಬೀಳುತ್ತದೆ. ಅದರೆ 'ಜೊತೆಜೊತೆಯಲಿ" ಚಿತ್ರ, 125 ದಿನಗಳನ್ನು ಪೂರೈಸಿದ ನಂತರ ಕೂಡ ಸ್ಪರ್ಧೆಯಲ್ಲಿ ಎರಡನೇ ಸ್ಥಾನದಲ್ಲಿದೆ.
  3. ನೀಲಕಂಠ : ರಾಜ್ಯದ ಉತ್ತರ ಭಾಗದಲ್ಲಿ ಹೆಚ್ಚಿನ ಲಾಭಗಳಿಸಿದರೂ, ಒಟ್ಟಾರೆ ಸಾಧನೆ ಸಾಮಾನ್ಯ ಎನ್ನಬಹುದು. ರಾಜ್ಯದ ಎಲ್ಲೆಡೆ ಯಶಸ್ಸು ಗಳಿಸಲು ರವಿಚಂದ್ರನ್‌ ಅಭಿನಯದ 'ನೀಲಕಂಠ" ವಿಫಲವಾಗಿದೆ. ನಮಿತಾರ ಮೈಮಾಟದ ಮೋಡಿ ಇನ್ನೆಷ್ಟು ದಿನ ಚಿತ್ರವನ್ನು ಕಾಯುವುದೋ ನೋಡಬೇಕು!
  4. ಸಿಕ್ಸರ್‌ : ಬಿಡುಗಡೆಯಾದ ಮೊದಲ ವಾರ ಭರ್ಜರಿ ಒಪನಿಂಗ್‌ ಪಡೆದ ನಂತರ, ಯಾಕೋ ಕೊಂಚ ಡಲ್‌ ಅಗಿದೆ. ಯುವ ಜನತೆಗೆ ಪ್ರಜ್ವಲ್‌ ದೇವರಾಜ್‌ ಅಭಿನಯ ತಕ್ಕ ಮಟ್ಟಿಗೆ ಇಷ್ಟ ವಾಗಿದೆ ಎಂಬುದು ಅಶಾದಾಯಕ ಸಂಗತಿ. ಉಳಿದಂತೆ ಗಳಿಕೆ ಸಾಮಾನ್ಯ ಮಟ್ಟದಲ್ಲಿದೆ.ಈ ವಾರ ಬಿಡುಗಡೆ ಅದ 'ಅರಸು", 'ಪೂಜಾರಿ" ಚಿತ್ರಗಳ ಆರಂಭದ ದಿನದ ಗಳಿಕೆಗಳು ಆಶಾದಾಯಕವಾಗಿವೆ.
  5. ಸಿರಿವಂತ : ವಿಷ್ಣು ಅಭಿನಯದ ಈ ಚಿತ್ರ ಶತದಿನ ಪೂರೈಸಿದ ನಂತರವೂ, ಕೆಲಭಾಗದಲ್ಲಿ ಗಳಿಕೆಯಲ್ಲಿ ಉತ್ತಮ ಬೆಳವಣಿಗೆ ತೋರುತ್ತಿದೆ.
English summary
Top-5 Kannada Films : Mungaru Male overtakes Jothe Jotheyalli to become this fortnights leading Kannada film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada