»   » ಅಜರುದ್ದೀನ್‌ ಈಗ ನಿರ್ಮಾಪಕಕ್ರಿಕೆಟ್ಟಾಡುವ ಆಸೆ ಕಮರಿ ಹೋಗಿರುವ ಹೊತ್ತಲ್ಲಿ ಹೆಂಡತಿ ಬಿಜಲಾನಿ ಮತ್ತು ಮೈದುನನ ಜೊತೆ ಸಿನಿಮಾ ಹಾಗೂ ಧಾರಾವಾಹಿಗೆ ದುಡ್ಡು ಹಾಕಲು ಅಜರ್‌ ತೀರ್ಮಾನಿಸಿದ್ದಾರೆ.

ಅಜರುದ್ದೀನ್‌ ಈಗ ನಿರ್ಮಾಪಕಕ್ರಿಕೆಟ್ಟಾಡುವ ಆಸೆ ಕಮರಿ ಹೋಗಿರುವ ಹೊತ್ತಲ್ಲಿ ಹೆಂಡತಿ ಬಿಜಲಾನಿ ಮತ್ತು ಮೈದುನನ ಜೊತೆ ಸಿನಿಮಾ ಹಾಗೂ ಧಾರಾವಾಹಿಗೆ ದುಡ್ಡು ಹಾಕಲು ಅಜರ್‌ ತೀರ್ಮಾನಿಸಿದ್ದಾರೆ.

Subscribe to Filmibeat Kannada

ಮುಖಪುಟ  --> ಸ್ಯಾಂಡಲ್‌ವುಡ್‌  --> ಕನ್ನಡ ಚಿತ್ರ ಕುಟೀರ  --> ವರದಿಫೆಬ್ರವರಿ 27, 2003

ಅಜರುದ್ದೀನ್‌ ಈಗ ನಿರ್ಮಾಪಕ
ಕ್ರಿಕೆಟ್ಟಾಡುವ ಆಸೆ ಕಮರಿ ಹೋಗಿರುವ ಹೊತ್ತಲ್ಲಿ ಹೆಂಡತಿ ಬಿಜಲಾನಿ ಮತ್ತು ಮೈದುನನ ಜೊತೆ ಸಿನಿಮಾ ಹಾಗೂ ಧಾರಾವಾಹಿಗೆ ದುಡ್ಡು ಹಾಕಲು ಅಜರ್‌ ತೀರ್ಮಾನಿಸಿದ್ದಾರೆ.

*ದಟ್ಸ್‌ಕನ್ನಡ ಬ್ಯೂರೋ

ಕ್ರಿಕೆಟ್‌ ನಿಷೇಧದಿಂದ ಜಡೇಜಾಗೆ ಬಿಡುಗಡೆ ಸಿಕ್ಕಿದ್ದರಿಂದ ಪ್ರಚೋದಿತರಾಗಿ ತಮ್ಮ ನಿಷೇಧದ ಬೇಲಿಯನ್ನೂ ತೆಗೆಯಿರಿ ಎಂಬ ಅಜರ್‌ ಮನವಿಯನ್ನು ಕೋರ್ಟು ತಿರಸ್ಕರಿಸಿದ ಕಾರಣ ಅವರು ಸಿನಿಮಾ ನಿರ್ಮಾಪಕರಾಗಲು ಹೊರಟಿದ್ದಾರೆ. ಇದು ಹೊಸ ಮೈದಾನದಲ್ಲಿ ಅಜರುದ್ದೀನ್‌ ಹೊಸ ವರಸೆ. ಅವರ ಜೊತೆಗೆ ಹೆಂಡತಿ ಸಂಗೀತಾ ಬಿಜಲಾನಿ ಮತ್ತು ಮೈದುನ ಸುನಿಲ್‌ ಬಿಜಲಾನಿ ಇದ್ದಾರೆ.

ಸಿನಿಮಾಗಳು, ಟೀವಿ ಧಾರಾವಾಹಿಗಳು ಮತ್ತು ವಿದೇಶಗಳಲ್ಲಿ ಸಿನಿಮಾ ಮನರಂಜನಾ ಪ್ರದರ್ಶನಗಳ ಮೇಲೆ ಹಣ ಹೂಡುವುದು ಅಜರ್‌ ಉಮೇದಿ. ಇದಕ್ಕಾಗಿ ಲಾಭ ತಂದುಕೊಡಬಲ್ಲ ಕುಳಗಳನ್ನೇ ಅವರು ಹುಡುಕುತ್ತಿದ್ದಾರೆ. ನಿರ್ದೇಶಕರಾದ ರಾಜೀವ್‌ ಮೆನನ್‌, ಸಂಜಯ್‌ ಚೌಹಾನ್‌ ಮತ್ತು ಶಿವಸುಬ್ರಮಣ್ಯಂ ಅಜರ್‌ ನಿರ್ಮಾಣಕ್ಕಾಗಿ ಈಗಾಗಲೇ ಸ್ಕಿೃಪ್ಟ್‌ ತಯಾರಿಸಲು ತೊಡಗಿದ್ದಾರೆ. ‘ಸೀ ಹಾಕ್ಸ್‌ ’ ಮತ್ತು ‘ಆಂಖೆ’ಯಂಥಾ ಹಿಟ್‌ ಧಾರಾವಾಹಿಗಳನ್ನು ನಿರ್ದೇಶಿಸಿದ ಶಿವಂ ನಾಯರ್‌ ಕೈಲಿ ಒಂದು ಸಿನಿಮಾ ಮಾಡಿಸುವ ಯೋಚನೆಯೂ ಅಜರ್‌ಗಿದೆ.

ಅಜರ್‌- ಸಂಗೀತ ಮ್ಯಾನೇಜ್‌ಮೆಂಟ್‌ ಸರ್ವಿಸ್‌ಗೆ ಹೊಸದೇನಾದರೂ ಮಾಡಬೇಕೆಂಬ ಹಟ ಹುಟ್ಟುವುದರಲ್ಲಿ ಅಜರ್‌ ಮೈದುನ ಸುನಿಲ್‌ ಬಿಜಲಾನಿಯದ್ದು ಸಿಂಹಪಾಲು. ಸಾಕಷ್ಟು ಮಾರುಕಟ್ಟೆ ಸಮೀಕ್ಷೆ ನಡೆಸಿದ ನಂತರ ಸುನಿಲ್‌ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಈಗ ರೊಮ್ಯಾಂಟಿಕ್‌ ಚಿತ್ರ ನಿರ್ಮಿಸಬಾರದು. ಮರ್ಡರ್‌ ಮಿಸ್ಟರಿ, ಸೂಪರ್‌ ನ್ಯಾಚುರಲ್‌ ಚಿತ್ರಗಳಿಗಷ್ಟೇ ದುಡ್ಡು ಗಿಟ್ಟೋದು ಅನ್ನುವುದು ಅವರ ಅಂಬೋಣ. ಇದಕ್ಕೆ ಅಜರ್‌ ಸಹಮತವೂ ಉಂಟು.

ನಿಮ್ಮ ಸಿನಿಮಾಗಳಲ್ಲಿ ಯಾವ್ಯಾವ ನಾಯಕ- ನಾಯಕಿಯರನ್ನು ಹಾಕಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ, ಇನ್ನೂ ಆಯ್ಕೆಯಾಗಿಲ್ಲ ಎನ್ನುತ್ತಾರೆ ಅಜರ್‌. ನೀವು ಹಾಗೂ ಬಿಜಲಾನಿ ನಟಿಸುವಿರಾ ಎಂದರೆ, ‘ಸಂಗೀತ ಈ ಯೋಜನೆಗೆ ಬ್ಯಾಕ್‌ಬೋನಷ್ಟೆ. ಇನ್ನು ನಾನು ನಟಿಸೋದು...’ ಅಂತ ನಗುತ್ತಾರೆ.

ಈವರೆಗೆ ಕ್ರಿಕೆಟ್ಟು ಕ್ರಿಕೆಟ್ಟು ಅಂತ ಹೈರಾಣಾಗಿ ಹೋಗಿದ್ದೇನೆ. ಅದಕ್ಕೇ ಈ ಹೊಸ ಯತ್ನ ಅಂತ ಅಜರ್‌ ಹೇಳುವಾಗ ಅವರ ಮೊಗದಲ್ಲಿ ವಿಷಾದದ ಛಾಯೆಯಿತ್ತು.


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada