»   »  ಬಾಲಿವುಡ್‌ನಲ್ಲಿ ಕಪಿಲ್‌ದೇವ್‌

ಬಾಲಿವುಡ್‌ನಲ್ಲಿ ಕಪಿಲ್‌ದೇವ್‌

Posted By: Staff
Subscribe to Filmibeat Kannada

ಮುಂಬಯಿ : ಭಾರತೀಯ ಕ್ರಿಕೆಟ್‌ನ ಮಾಜಿ ತಾರೆ ಕಪಿಲ್‌ದೇವ್‌ ಈಗ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ಮಿಂಚಿದ್ದಾಯಿತು, ಗಾಲ್ಫ್‌ -ಸಮಾಜಸೇವೆ ಹಾಗೂ ಸಾಂಸ್ಕೃತಿಕ ರಾಯಭಾರಿ ಪಾತ್ರಗಳಲ್ಲಿ ಸುದ್ದಿ ಮಾಡಿದ್ದಾಯಿತು, ಈಗ ಸಿನಿಮಾ ಸರತಿ.

ಕ್ರೀಡಾ ಮನೋಭಾವದ ಚಿತ್ರದಲ್ಲಿ ನಟಿಸುವ ಮೂಲಕ ಕಪಿಲ್‌ ಬಾಲಿವುಡ್‌ ಪ್ರವೇಶಿಸುತ್ತಿದ್ದಾರೆ. ಇದೊಂದು ಬಾಕ್ಸಿಂಗ್‌ ಪಟುವಿನ ಚಿತ್ರ. ನಾಯಕನಿಗೆ (ಸೋಯಲ್‌ ಖಾನ್‌) ಬಾಕ್ಸಿಂಗ್‌ನಲ್ಲಿ ಮಹತ್ಸಾಧನೆ ಮಾಡುವ ಹಂಬಲ. ಆದರೆ, ಅಲ್ಲೂ ರಾಜಕೀಯ ಪಿತೂರಿ. ಇದರಿಂದ ಬೇಸತ್ತ ನಾಯಕ ಕ್ರೀಡಾಕಣದಿಂದಲೇ ಹೊರಬರುವ ನಿರ್ಧಾರ ಮಾಡುತ್ತಾನೆ. ರಕ್ತಗತವಾಗಿ ಬಂದ ಕ್ರೀಡೆಯ ಒಲವು ಅವನಿಂದ ಹೋಗದೇ ಟೀವಿಯಾಂದಕ್ಕೆ ಕ್ರೀಡಾ ಪತ್ರಕರ್ತನಾಗುತ್ತಾನೆ....... ಕಥೆಯ ಎಳೆ ಹೀಗೆ ಸಾಗುತ್ತದೆ.

ಸಿನಿಮಾದ ಪತ್ರಕರ್ತ ಕಪಿಲ್‌ದೇವ್‌ ಸೇರಿದಂತೆ, ಕ್ರೀಡೆಯಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದವರ ಸಂದರ್ಶನ ಮಾಡುತ್ತಾನೆ. ಕಪಿಲ್‌ದೇವ್‌ ಚಿತ್ರದಲ್ಲಿಯೂ ಕಪಿಲ್‌ ಆಗಿ ಕಾಣಿಸುತ್ತಿರುವದು ಚಿತ್ರದ ವಿಶೇಷಗಳಲ್ಲೊಂದು. ಚಿತ್ರದ ಬಜೆಟ್‌ ಸುಮಾರು 1.1 ಮಿಲಿಯನ್‌ ಡಾಲರ್‌. ಚಿತ್ರದ ಹೆಸರು 'ಆರ್ಯನ್‌".

ಬಾಲಿವುಡ್‌ ಕ್ರೀಡೆಗೆ ಸಂಬಂಧಿಸಿದ ಸಿನಿಮಾ ತೆಗೆಯುವ ಕಡೆ ಆಸಕ್ತಿ ತೋರಿಸುತ್ತಿಲ್ಲ. ಆರ್ಯನ್‌ ಚಿತ್ರವು ಇದಕ್ಕೆ ನಾಂದಿಯಾದರೆ, ಅಷ್ಟೇ ಸಾಕು; ಅದೇ ಖುಷಿ ಎಂದರು, ಇತ್ತೀಚೆಗೆ ಮುಂಬಯಿಯ ರಿವರ್ಡಲ್‌ ಸ್ಟುಡಿಯೋದಲ್ಲಿ ಸುದ್ದಿಗಾರರೊಂದಿಗೆ ಮಾತಿಗೆ ಸಿಕ್ಕ ಕಪಿಲ್‌.

ಪೂನಂ ಖುಬಾನಿ ಮತ್ತು ವಿಪಿನ್‌ ಆನಂದ್‌ ಚಿತ್ರದ ನಿರ್ಮಾಪಕರು. ಚಿತ್ರದ ನಿರ್ದೇಶನವನ್ನು ಅಭಿಷೇಕ್‌ ಕಪೂರ್‌ ಮಾಡಲಿದ್ದಾರೆ. ಚಿತ್ರದಲ್ಲಿ ಸೋಯಲ್‌ ಖಾನ್‌, ಕಪಿಲ್‌ ದೇವ್‌ ಅಲ್ಲದೇ ಇಂದರ್‌ ಕುಮಾರ್‌, ಸ್ನೇಹಾ ಉಲ್ಲಾಳ್‌, ಸತೀಶ್‌ ಷಾ ಮತ್ತು ಫರೀದಾ ಜಲಾಲ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

English summary
Indias former ace Test cricketer Kapil Dev, will star in a Bollywood big screen sports movie as himself
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada