»   » ಮುಂಗಾರು ಮಳೆ-4ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು...

ಮುಂಗಾರು ಮಳೆ-4ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು...

Subscribe to Filmibeat Kannada


ಮುಂಗಾರು ಮಳೆ’ ಚಿತ್ರದ ಈ ಹಾಡನ್ನು ಜಯಂತ್‌ಕಾಯ್ಕಿಣಿ ಎಸ್‌ಎಂಎಸ್‌ನಲ್ಲೇ ಬರೆದು ಕಳುಹಿಸಿದರಂತೆ... ಸಂಗೀತ ನಿರ್ದೇಶಕರ ಸಲಹೆ ಸೂಚನೆಯನ್ವಯ ಎಸ್‌ಎಸ್‌ಎಸ್‌ನಲ್ಲೇ ಬದಲಾವಣೆಗಳನ್ನು ಮಾಡಿ, ಹಾಡು ಮುಗಿಸಿದರಂತೆ!

ಗಾಯಕ :ಸೋನು ನಿಗಮ್‌
ಸಾಹಿತ್ಯ :ಜಯಂತ್‌ ಕಾಯ್ಕಿಣಿ

ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು
ಮಾಯದ ಲೋಕದಿಂದ ನನಗಾಗೆ ಬಂದವಳೆಂದು
ಆಹಾ ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ
ಅನಿಸುತಿದೆ ಯಾಕೋ ಇಂದು

ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
ಇನ್ಯಾರ ಕನಸಲೋ ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜಾ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣ
ನಾ ಖೈದಿ ನೀನೆ ಸೆರೆಮನೆ
ತಪ್ಪಿ ನನ್ನ ಅಪ್ಪಿಕೊ ಒಮ್ಮೆ ಹಾಗೆ ಸುಮ್ಮನೆ
ಅನಿಸುತಿದೆ ಯಾಕೋ ಇಂದು

ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ ಕೇವಲ ನಿನ್ನದೇ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ
ಹೃದಯದಿ ನಾನೇ ಕೊರೆದಿರುವೆ ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೇ ಹಾಗೇ ಸುಮ್ಮನೆ

ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು
ಮಾಯದ ಲೋಕದಿಂದ ನನಗಾಗೆ ಬಂದವಳೆಂದು
ಆಹಾ ಎಂಥ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ
ಅನಿಸುತಿದೆ ಯಾಕೋ ಇಂದು

Please Wait while comments are loading...