»   » ಸುನೀಲ್‌ ಎನ್ನುವ ನಮ್ಮೂರ ಹುಡುಗ

ಸುನೀಲ್‌ ಎನ್ನುವ ನಮ್ಮೂರ ಹುಡುಗ

Posted By: Super
Subscribe to Filmibeat Kannada

ಸುನೀಲ್‌ರಾವ್‌. ಕಣ್ಣುಗಳಲ್ಲಿ ಮಿಂಚುಗಳನ್ನು ಅಡಗಿಸಿಕೊಂಡ ಭರವಸೆಯ ಯುವನಟ. ಹಾಗಂತ ಗಾಂಧಿನಗರ ಹಾಡಿಹೊಗಳುತ್ತಿದೆ. ಆದರೆ ಅವಕಾಶ ಮಾತ್ರ ಅಷ್ಟಕ್ಕಷ್ಟೇ.

ಕಿರುತೆರೆಯಲ್ಲಿ ಮೂಡಿಬಂದ ಯಶಸ್ವಿ ಧಾರಾವಾಹಿ 'ಮನ್ವಂತರ" ನಿಮಗೆ ನೆನಪಿರಬೇಕು. ಈ ಧಾರಾವಾಹಿಯಲ್ಲಿ ತನ್ನ ಅಭಿನಯ ಪ್ರಚುರ ಪಡಿಸಿ ಬೆಳ್ಳಿತೆರೆಯ ಮೆಟ್ಟಿಲುಗಳನ್ನೇರಿದ ಯಶಸ್ವಿ ನಟ ಸುನೀಲ್‌. ಅವರ ಅಭಿನಯದ 'ಪ್ರೀತಿ ಪ್ರೇಮ ಪ್ರಣಯ" ಶತದಿನೋತ್ಸವ ಕಂಡಿದೆ. 'ಎಕ್ಸ್‌ಕ್ಯೂಸ್‌ಮಿ" ಕೂಡ ಇತ್ತೀಚೆಗೆ ಶತಕ ಬಾರಿಸಿತು. ಸದ್ಯ ಚಿತ್ರೀಕರಣಗೊಳ್ಳುತ್ತಿರುವ 'ಬಾ ಬಾರೋ ರಸಿಕ " ಶತದಿನ ಆಚರಿಸಿದರೆ ಈತ ಹ್ಯಾಟ್ರಿಕ್‌ ಹಿರೋ...

ಸುನೀಲ್‌ ಗಾಯಕ ಕೂಡ. ರಂಗಭೂಮಿ, ಸಂಗೀತ ಕ್ಷೇತ್ರದೊಂದಿಗೆ ಸುನೀಲ್‌ಗೆ ನಿಕಟವಾದ ನಂಟಿದೆ. ಇಲ್ಲದೆ ಏನು ; ಆತನ ತಾಯಿ ಹೇಳಿಕೇಳಿ ಕನ್ನಡದ ಕೋಗಿಲೆ, ಬಿ.ಕೆ.ಸುಮಿತ್ರಾ.

ಸುನೀಲ್‌ ಹೊಸ ಚಿತ್ರ 'ಬಾ ಬಾರೋ ರಸಿಕ " . ಈ ಚಿತ್ರದ ಚಿತ್ರೀಕರಣಕ್ಕಾಗಿ ಮೊನ್ನೆ ಹೊಸೂರು ರಸ್ತೆಗೆ ಬಂದಿದ್ದ ಸುನೀಲ್‌- 'ಇಂಡಿಯಾ ಇನ್ಫೋ"ಗೂ ಬಂದಿದ್ದರು. ಒಂದೆಡೆ ನಿಲ್ಲದೆ ಚಡಪಡಿಸುವ ಆತನನ್ನು ಕಂಡಾಗ ಕಾಲಲ್ಲಿ ಚಕ್ರವಿದೆ ಅನ್ನಿಸದಿರದು. ಆದರೆ, ನಾಯಕರುಗಳಿಗೆ ಇರುವ 'ಅಹಂ"ನಿಂದ ಸುನೀಲ್‌ ಮಾರುದೂರ. ಆತನಾಯ್ತು ಆಭಿನಯವಾಯ್ತು. ಕನ್ನಡ ಚಿತ್ರರಂಗಕ್ಕೆ ನಿಜವಾಗ್ಲೂ ಬೇಕಾದವರು ಇಂಥವರೇ ತಾನೆ !

ಅಷ್ಟೇ ಅಲ್ಲ , ಈ ತುಂಟಾಟದ ಸುನೀಲ್‌ ಆಂಗ್ಲ ಚಿತ್ರವೊಂದರಲ್ಲಿಯೂ ಅಭಿನಯಿಸಿದ್ದಾನೆ. ಸುನೀಲ್‌, ತನ್ನ ಗುಣ ಮತ್ತು ಪ್ರತಿಭೆಯಿಂದ ಚಿತ್ರರಂಗದಲ್ಲಿ ಇನ್ನಷ್ಟು ಯಶಸ್ಸಿನ ಮೆಟ್ಟಿಲುಗಳನ್ನೇರಲಿ ಎಂದು ಹಾರೈಸುವ.

English summary
Upcoming actor Sunil Rao has acted in two films which run for 100 days. But recongnition still eludes him.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada