»   » ಈ ಟೀವಿ ಕನ್ನಡ ವಾಟಿಕಾ ಚಲನಚಿತ್ರ ಪ್ರಶಸ್ತಿ ಪ್ರದಾನ

ಈ ಟೀವಿ ಕನ್ನಡ ವಾಟಿಕಾ ಚಲನಚಿತ್ರ ಪ್ರಶಸ್ತಿ ಪ್ರದಾನ

Posted By:
Subscribe to Filmibeat Kannada


ಪ್ರಶಸ್ತಿಗಳ ಸರಮಾಲೆ ಧರಿಸಿದ ಜೋಗಿ, ಶಿವರಾಜ್‌ಕುಮಾರ್‌-ರಮ್ಯಾ ಶ್ರೇಷ್ಠ ನಟ-ನಟಿ...

ಬೆಂಗಳೂರು : 2005ನೇ ಸಾಲಿನ ‘ಈ ಟೀವಿ ಕನ್ನಡ ವಾಟಿಕಾ ಚಲನ ಚಿತ್ರ ಪ್ರಶಸ್ತಿ ’ಪ್ರದಾನ ಸಮಾರಂಭ ಭಾನುವಾರ ಅರಮನೆ ಮೈದಾನದಲ್ಲಿ ನಡೆಯಿತು.

ಕಳೆದ ವರ್ಷ ಪ್ರತಿದಿನ ವೀಕ್ಷಕರು ನೀಡಿದ ಅಭಿಪ್ರಾಯ ಅನುಸರಿಸಿ, ವಿವಿಧ ವಿಭಾಗದ(ಶ್ರೇಷ್ಠ ನಟ, ಶ್ರೇಷ್ಠ ನಟಿ, ನಿರ್ದೇಶಕ ಇತ್ಯಾದಿ...) ಪ್ರಶಸ್ತಿಗಳಿಗೆ ಆಯ್ಕೆಮಾಡಲಾಗಿತ್ತು. ‘ಜೋಗಿ’ ಚಿತ್ರವು 11 ಪ್ರಶಸ್ತಿಗಳನ್ನು ತನ್ನ ಒಡಲಿಗೆ ಹಾಕಿಕೊಂಡಿತು.

ಜೋಗಿ ಚಿತ್ರದಲ್ಲಿನ ಅಭಿನಯಕ್ಕಾಗಿ ಶಿವರಾಜ್‌ಕುಮಾರ್‌ ಶ್ರೇಷ್ಠ ನಟ ಪ್ರಶಸ್ತಿ ಪಡೆದುಕೊಂಡರೆ, ಅಮೃತಧಾರೆ ಚಿತ್ರದಲ್ಲಿ ನೀಡಿದ ಹೃದಯಸ್ಪರ್ಶಿ ಅಭಿನಯಕ್ಕೆ ರಮ್ಯ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು.

ವಿವಿಧ ಪ್ರಶಸ್ತಿಗಳ ಪಟ್ಟಿ ಕೆಳಗಿನಂತಿದೆ :

  • ಅತ್ಯುತ್ತಮ ನಿರ್ದೇಶನ, ಗೀತ ರಚನೆ ಹಾಗೂ ಕಥೆಗಾರ ಪ್ರಶಸ್ತಿ - ಪ್ರೇಮ್‌ (ಜೋಗಿ)
  • ಉತ್ತಮ ಛಾಯಾಗ್ರಹಣ ಪ್ರಶಸ್ತಿ - ಎಂ.ಆರ್‌.ಶ್ರೀನಿ
  • ಉತ್ತಮ ಸಂಭಾಷಣೆಕಾರ - ಮಳವಳ್ಳಿ ಸಾಯಿಕೃಷ್ಣ
  • ಉತ್ತಮ ಖಳನಟ - ಆದಿ ಲೋಕೇಶ್‌(ಜೋಗಿ)
  • ಪೋಷಕ ನಟಿ - ಅರುಧಂತಿನಾಗ್‌
  • ಸಂಗೀತ ನಿರ್ದೇಶಕ - ಗುರುಕಿರಣ್‌( ಜೋಗಿ)
  • ಉತ್ತಮ ಗಾಯಕಿ - ಚಿತ್ರಾ (ಆಕಾಶ್‌)
  • ಉತ್ತಮ ಹಿನ್ನೆಲೆ ಗಾಯಕ - ಎಸ್‌.ಪಿ.ಬಾಲಸುಬ್ರಹ್ಮಣ್ಯಂ(ಅಣ್ಣ ತಂಗಿ)
  • ಹಾಸ್ಯನಟಿ - ಶೃತಿ (ರಾಮ ಶಾಮ ಭಾಮ)
  • ಉತ್ತಮ ಪೋಷಕ ನಟ - ರವಿಚಂದ್ರನ್‌ (ಅಹಂ ಪ್ರೇಮಾಸ್ಮಿ)
(ದಟ್ಸ್‌ ಕನ್ನಡ ವಾರ್ತೆ)
Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada