»   » ‘ಎರಡು ರೇಖೆಗಳು’ ಒಂದಾಗಲು ಸಾಧ್ಯವಿಲ್ಲವೆ, ಸರಿತಾ?

‘ಎರಡು ರೇಖೆಗಳು’ ಒಂದಾಗಲು ಸಾಧ್ಯವಿಲ್ಲವೆ, ಸರಿತಾ?

Subscribe to Filmibeat Kannada


ತಾರಾಜೋಡಿಗಳು ಕೂಡಿ ಬಾಳುವುದಕ್ಕಿಂತ, ಕೂಡದೇ ಬಾಳುವುದೇ ಹೆಚ್ಚು! ‘ತಾರಾಜೋಡಿ ಮದುವೆ ಬೆನ್ನಲ್ಲಿಯೇ ಡೈವರ್ಸ್‌ ಸಹಾ ಅಂಟಿಕೊಂಡಿರುತ್ತದೆ’ --ಈ ಮಾತಿಗೆ ನಟಿ ಸರಿತಾ ಸಹಾ ಹೊರತಲ್ಲ! ಹೌದು ಹಿರಿಯ ನಟಿ ಸರಿತಾ, ತಮ್ಮ ಪತಿಯಿಂದ ವಿಚ್ಛೇದನ ಪಡೆಯಲು ಕೋರ್ಟ್‌ ಕಟ್ಟೆ ಮೇಲೆ ನಿಂತಿದ್ದಾರೆ.

ಮಲಯಾಳಂ ನಟ ಮುಖೇಶ್‌ರನ್ನು ಮದುವೆಯಾಗಿದ್ದ ಸರಿತಾ, ಈಗ ವಿಚ್ಛೇದನ ಪಡೆಯಲು ಚೆನ್ನೈನ ಕೌಟುಂಬಿಕ ನ್ಯಾಯಾಲಯದ ಮುಂದೆ ನಿಂತಿದ್ದಾರೆ. ಗಂಡನೊಂದಿಗೆ ಬದುಕು ಹಂಚಿಕೊಳ್ಳಲು ಕಷ್ಟವಾಗಿದೆ. ದಯವಿಟ್ಟು ಬಿಡುಗಡೆ ನೀಡಿ ಎಂದು ಕೋರ್ಟ್‌ಗೆ ಅವರು ಮನವಿ ಸಲ್ಲಿಸಿದ್ದಾರೆ.

ಕೆ.ಬಾಲಚಂದರ್‌ ನಿರ್ದೇಶನದ ‘ತಪ್ಪು ತಾಳಂಗಲ್‌’ ಮೂಲಕ ಬಣ್ಣದ ಬದುಕು ಆರಂಭಿಸಿದ ಸರಿತಾ, ಕನ್ನಡ ತಮಿಳು, ತೆಲುಗಿನಲ್ಲಿ ಮನೆಮಾತು. ತಮ್ಮ ಪ್ರಬುದ್ಧ ಅಭಿನಯದಿಂದ ಸರಿತಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ‘ ಮರೋಚರಿತ್ರಾ’, ‘ತಣ್ಣೀರ್‌ ತಣ್ಣೀರ್‌’, ‘ಅಗ್ನಿಸಾಕ್ಷಿ’, ಕನ್ನಡದಲ್ಲಿ ‘ಎರಡು ರೇಖೆ’, ‘ಹೊಸಬೆಳಕು’, ‘ಚಲಿಸುವ ಮೋಡಗಳು’, ‘ಕಾಮನಬಿಲ್ಲು ’ ಮತ್ತಿತರ ಚಿತ್ರಗಳಲ್ಲಿ ಸರಿತಾ, ತಮ್ಮ ಕಲಾ ಪ್ರತಿಭೆಯನ್ನು ಬಿಚ್ಚಿಟ್ಟಿದ್ದಾರೆ.

ದಶಕಗಳ ಹಿಂದೆ ನಟ ಮುಖೇಶ್‌ರೊಂದಿಗೆ ದಾಂಪತ್ಯ ಪ್ರವೇಶಿಸಿದ್ದ ಸರಿತಾ, ಪ್ರತ್ಯೇಕ ಬದುಕನ್ನು ಬಯಸುತ್ತಿದ್ದಾರೆ. ಮತ್ತೊಂದು ದಡದಲ್ಲಿರುವ ಪತಿ ಮುಖೇಶ್‌, ಕೊಚ್ಚಿಯ ಫ್ಯಾಮಿಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಿಂಗಳಿಗೆ ಒಂದು ಸಲ ನನ್ನ ಇಬ್ಬರು ಮಕ್ಕಳನ್ನು ನೋಡಲು ಅವಕಾಶ ನೀಡಬೇಕೆಂದು ಅವರು ಕೋರಿದ್ದಾರೆ.

ಸರಿತಾ ಬದುಕಲ್ಲಿನ ಬಿರುಗಾಳಿ ದೂರವಾಗಲಿ.. ಮುರಿದ ಮನಸ್ಸುಗಳು ಒಂದಾಗಲಿ... ಎಂಬುದು ‘ದಟ್ಸ್‌ ಕನ್ನಡ’ ಹಾರೈಕೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada