For Quick Alerts
  ALLOW NOTIFICATIONS  
  For Daily Alerts

  ಶಿವು ಜೊತೆ ‘ಸ್ಮೈಲ್‌’ ಮಾಡಲು ಒಪ್ಪಿದ್ದಾಳೆ

  By Super
  |

  ಶಿವರಾಜ್‌ಕುಮಾರ್‌ ಜೊತೆ ನಗಲು ಕೊನೆಗೂ ಬಾಲಿವುಡ್‌ ಬೆಡಗಿಯಾಬ್ಬಳು ಗೊತ್ತಾಗಿದ್ದಾಳೆ. ಸುಖಾಸುಮ್ಮನೆ ನಗುವ ಈ ಹುಡುಗಿ ಆರಕ್ಕೆ ಖಂಡಿತ ಏರಲಿಲ್ಲ. ಎರಡೇ ಚಿತ್ರಗಳ ನಂತರ ಮೂರಕ್ಕಿಂತ ಕೆಳಕ್ಕೆ ಬಿದ್ದದ್ದಂತೂ ನಿಜ. ಹೆಸರು ನೇಹಾ.

  ರಾಣಿ ಮುಖರ್ಜಿ ಹಾಗೂ ಬಿಪಾಶ ಬಸು ದುಬಾರಿಯಾದ್ದರಿಂದ ಸುಲಭವಾಗಿ ಸಿಕ್ಕ ನೇಹಾ ಸ್ಮೈಲ್‌ ಮಾಡಲು ಒಪ್ಪಿದ್ದಾಳೆ. ಕಡ್ಡಿ ತುಂಡುಮಾಡಿದಂತೆ ಮಾತಾಡುವುದಕ್ಕೇ ಹೆಸರಾಗಿರುವ ನೇಹಾ ಕಿರಿಕಿರಿಯ ಬಗ್ಗೆ ರಾಮ್‌ಗೋಪಾಲ್‌ ವರ್ಮಾರಂಥಾ ಅನೇಕ ನಿರ್ದೇಶಕರು ಗಂಟೆಗಟ್ಟಲೆ ಮಾತಾಡುತ್ತಾರೆ.

  ಬಾಬಿ ಡಿಯೋಲ್‌ ಜೊತೆ ಕರೀಬ್‌ ಎಂಬ ಹಿಂದಿ ಚಿತ್ರದಲ್ಲಿ ಸಾದಾ ಹುಡುಗಿಯಾಗಿ ಹಿರಿತೆರೆಗೆ ಬಂದ ನೇಹಾ ನಕ್ಕರೆ ಚೆನ್ನ. ಆ ಕಾರಣಕ್ಕೇ 'ಹೋಗಿ ಪ್ಯಾರ್‌ ಕಿ ಜೀತ್‌" ಎಂಬ ಕಾಮಿಡಿಗೆ ನಾಯಕಿಯಾಗಿ ಗೊತ್ತಾದದ್ದು. ಎರಡೂ ಚಿತ್ರಗಳೂ ತೋಪಾದವು. ನೇಹಾಳ ಅಗ್ಗದ ನಗುವಿಗೆ ಆಫರ್‌ಗಳಿಗೇನೂ ಕೊರೆಯಿರಲಿಲ್ಲ. 'ಫಿಜಾ" ಚಿತ್ರದ ತೂಕದ ಪಾತ್ರ ಸ್ವಲ್ಪ ಭರವಸೆ ಹುಟ್ಟಿಸುವಂತಿತ್ತು. ಆದರೆ ತನ್ನ ಕಿರಿಕ್‌ನಿಂದ ಸಿಕ್ಕ ಆಫರ್‌ಗಳೆನ್ನೆಲ್ಲಾ ಕಾಲಲ್ಲಿ ಒದ್ದಳೆಂಬ ಆರೋಪ ಈಕೆಯ ಬೆನ್ನು ಬಿಡಲಿಲ್ಲ.

  ನಾಯಕ ಲೆಕ್ಕಕ್ಕೆ, ನಾಯಕಿ ಆಟಕ್ಕೆ ಅಂತ ಹೇಳಿದ ಯಾವುದೋ ನಿರ್ದೇಶಕನನ್ನು ಲೆಫ್ಟ್‌ ಅಂಡ್‌ ರೈಟ್‌ ತರಾಟೆಗೆ ತೆಗೆದುಕೊಂಡ ನೇಹಾ, 'ಹಾಗಾದರೆ ನಿಮ್ಮ ಹೀರೋ ಮರಗಳನ್ನೇ ತಬ್ಬಿಕೊಂಡು ಮುತ್ತಿಕ್ಕಲಿ" ಅಂತ ಫಟಾಫಟ್‌ ಹೇಳಿ ದರದರನೆ ಸೆಟ್‌ನಿಂದ ನಡೆದ ಟ್ರ್ಯಾಕ್‌ ರೆಕಾರ್ಡ್‌ ಇಟ್ಟುಕೊಂಡಿದ್ದಾಳೆ. ಅಣ್ಣಾವ್ರ ನೆಚ್ಚಿನ ಹೊಸ ನಟ ಮನೋಜ್‌ ಬಾಜ್‌ಪೇಯಿ ಬಾಯ್‌ಫ್ರೆಂಡ್‌ ಎಂಬುದು ನೇಹಾಳಿಗೆ ನಗುವನ್ನು ಬಿಟ್ಟರೆ ಇರುವ ಹೆಮ್ಮೆಯ ಕ್ವಾಲಿಫಿಕೇಷನ್‌.

  ನಿರ್ಮಾಪಕ ಎನ್‌.ಕೆ.ಪ್ರಕಾಶ್‌ ಬಾಬು ಹೇಳಿದಂತೆ ಬಾಲಿವುಡ್‌ ಬೆಡಗಿಯನ್ನು ಕರೆ ತಂದಿದ್ದಾರೆ. ಆದರೆ, ದೂರ್ವಾಸ ಮುನಿ ಸೀತಾರಾಂ ಕಾರಂತ್‌ ಈ ಕಿರಿಕಿರಿ ನಗೆ ನೇಹಾ ಜೊತೆ ಹೆಣಗಾಡಬೇಕಲ್ಲ !

  'ಶಿವರಾಜ್‌ಗೆ ಬಾಲಿವುಡ್‌ ಹುಡುಗಿಯೇ ಬೇಕಂತೆ"

  ಸ್ಮೈಲ್‌ ಚಿತ್ರೀಕರಣಕ್ಕೆ ಒಂದು ಪೇಸ್‌ ಸಿಕ್ಕಿರುವ ಖುಷಿಯಲ್ಲಿ ಶಿವರಾಜ್‌ ಓಡಾಡಿಕೊಂಡಿದ್ದರೆ, ಕೂಡ್ಲು ರಾಮಕೃಷ್ಣ ಸಿಕ್ಕಸಿಕ್ಕವರಿಗೆ ಈತನ ವಿರುದ್ಧ ದೂರು ಹೇಳುತ್ತಿದ್ದಾರೆ. 'ಅವನಿಗೆ ಬಾಲಿವುಡ್‌ ಹುಡುಗಿಯೇ ಬೇಕಂತೆ ಕಣ್ರೀ" ಅಂತ ಕನಿಷ್ಠ ಒಂದು ಡಜನ್‌ ಸಿನಿಮಾ ಮಂದಿಗೆ ಹೇಳಿಕೊಂಡು ಬಂದಿದ್ದಾರೆ ಕೂಡ್ಲು. ಜುಗಾರಿ ಕ್ರಾಸ್‌ ಚಿತ್ರವನ್ನು ಆಮೇಲೆ ನಾನೇ ನಿರ್ದೇಶಿಸುವುದು. ಶಿವರಾಜ್‌ಗೆ ಚಿತ್ರದಲ್ಲಿ ಜಾಗವಿಲ್ಲ ಅನ್ನುತ್ತಿರುವ ಇವರು, ನಾಯಕಿಯ ಆಯ್ಕೆಯಲ್ಲಿ ಶಿವಣ್ಣನ ಹೆಂಡತಿ ಗೀತಾ ಮೂಗು ತೂರಿಸುತ್ತಾರೆಂದು ಈ ಹಿಂದೆ ಆರೋಪಿಸಿದ್ದರು.

  ತನ್ನ ಜೊತೆ ಮುಖಾಮುಖಿ ಮಾತಿಗೆ ಕೂರದ ಕೂಡ್ಲು ಹೀಗೆ ಯಾಕೆ ಮಾಡುತ್ತಿದ್ದಾರೆ ಅನ್ನುವುದು ಶಿವು ತಲೆನೋವು.

  English summary
  Neha to Smile with Shivraj kumar in the direction of Seetharam Karanth

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X