»   » ಕಡೆಗೂ ಬಂತು ‘ಕರ್ಣನ ಸಂಪತ್ತು’

ಕಡೆಗೂ ಬಂತು ‘ಕರ್ಣನ ಸಂಪತ್ತು’

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
ರಾಜಕೀಯವನ್ನು ತಲೆತುಂಬ ತುಂಬಿಕೊಂಡಿರುವ ಅಂಬರೀಷ್‌ಗೆ ಚಿತ್ರರಂಗಕ್ಕಿಂತಲೂ ರಾಜಕೀಯ ರಂಗವೇ ಇಷ್ಟವಾದಂತಿದೆ. ಕೆಪಿಸಿಸಿ ಅಧ್ಯಕ್ಷಗಿರಿಯತ್ತ ಕೈಚಾಚಿರುವ ಅಂಬರೀಷ್‌ ರಾಜಕೀಯ ರಂಗದಲ್ಲಿ ಕಳೆದು ಹೋಗಿದ್ದಾರೆ.

ಈ ಮಧ್ಯೆ ಉಪೇಂದ್ರರೊಂದಿಗೆ ‘ತಂದೆಗೆ ತಕ್ಕ ಮಗ’ ಚಿತ್ರದಲ್ಲಿ ಅವರು ನಟಿಸುತ್ತಿ ದ್ದಾರೆಂಬ ಸಂಗತಿ ಅಭಿಮಾನಿಗಳಿಗೆ ತುಸು ನೆಮ್ಮದಿ ತಂದಿದೆ. ಆ ಚಿತ್ರಕ್ಕೂ ಮೊದಲು ಅಂಬರೀಷ್‌ರ ಇನ್ನೊಂದು ಹಳೆ-ಹೊಸ ಚಿತ್ರವೊಂದು ತೆರೆ ಕಾಣಲಿದೆ. ಸುಮಾರು ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಡಬ್ಬದಿಂದ ಧೂಳು ಕೊಡವಿಕೊಂಡು ಪ್ರೇಕ್ಷಕರ ಮುಂದೆ ಬಂದು ನಿಲ್ಲುತ್ತಿರುವ ಚಿತ್ರ ‘ಕರ್ಣನ ಸಂಪತ್ತು’.

ಕಲಿಯುಗ ಕರ್ಣನೆಂದೇ ಅಭಿಮಾನಿಗಳಿಂದ ಗುರ್ತಿಸಲ್ಪಡುವ ಅಂಬರೀಷಣ್ಣನ ಚಿತ್ರವನ್ನು ನಿರ್ಮಿಸಿದ್ದೇ ನಮ್ಮ ಪುಣ್ಯ ಎನ್ನುತ್ತಿದ್ದಾರೆ ಚಿತ್ರದ ನಿರ್ಮಾಪಕ ಶಾಂತಾರಾಮ್‌. ಅವರ ತಮ್ಮ ಮುರಳಿ ಕೃಷ್ಣ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಚಿತ್ರದ ಬಗ್ಗೆ ಮತ್ತು ಅಂಬರೀಷ್‌ ಬಗ್ಗೆ ಸಾಕಷ್ಟು ಕನಸುಗಳನ್ನು ಹೊಂದಿರುವ ಈ ಸಹೋದರ ಜೋಡಿ, ಗಾಂಧಿನಗರದಲ್ಲಿ ನೆಲೆ ಸಿಕ್ಕಬಹುದೆಂಬ ಬಯಕೆಯಿಂದ ಸೈಕಲ್‌ ತುಳಿದದ್ದಕ್ಕಿಂತ, ಅಂಬರೀಷ್‌ಗೆ ನಮ್ಮ ಅಭಿಮಾನವನ್ನು ಅರ್ಪಿಸಿದ್ದೇವೆ ಎನ್ನುವ ತೃಪ್ತಿಗಾಗಿ ಚಡಪಡಿಸಿದ್ದೇ ಹೆಚ್ಚು.

ದುಡ್ಡು ಸುರಿದು ನಿರ್ಮಾಣ ಮಾಡಿದ ಚಿತ್ರಕ್ಕೆ ಚಿತ್ರಮಂದಿರ ಸಿಕ್ಕಲು ಇಷ್ಟು ವರ್ಷ ಬೇಕಾಯಿತೆಂದರೆ ಅಚ್ಚರಿಯಾಗುತ್ತದೆ. ಆದರೆ ವಾಸ್ತವದ ಕಹಿ ಈ ಸಹೋದರರಿಗಷ್ಟೇ ಗೊತ್ತು. ಮೇ ಮೊದಲ ವಾರದಲ್ಲಿ ಚಿತ್ರ ತೆರೆ ಕಾಣುತ್ತಿದೆ. ಅಂಬರೀಷ್‌ಗೆ ನಾಯಕಿಯಾಗಿ ತಾರಾ ಚಿತ್ರದಲ್ಲಿದ್ದಾರೆ. ಕರ್ಣನ ಸಂಪತ್ತು ಅಂಬಿ ಅಭಿಮಾನಿಗಳಿಗೆ ಇಷ್ಟವಾದರೇ ಶಾಂತಾರಾಮ್‌ ಸಹೋದರರು ನಿಟ್ಟುಸಿರು ಬಿಡಬಹುದು!

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada