»   » ನೆನಪಿರಲಿ, ಹಂಸಲೇಖ ಈಗ ‘ಕಟ್‌-ಆ್ಯಕ್ಷನ್‌’ ಹೇಳ್ತಾರೆ!

ನೆನಪಿರಲಿ, ಹಂಸಲೇಖ ಈಗ ‘ಕಟ್‌-ಆ್ಯಕ್ಷನ್‌’ ಹೇಳ್ತಾರೆ!

Subscribe to Filmibeat Kannada


1987ರ ‘ಪ್ರೇಮಲೋಕ’ ಯಾರಿಗೆ ನೆನಪಿಲ್ಲ. ರವಿಚಂದ್ರನ್‌ರ ‘ಪ್ರೇಮಲೋಕ’ ದಲ್ಲಿ ಗಾನಮಾಧುರ್ಯ ಹರಡಿದ್ದ ಹಂಸಲೇಖ, ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರಿಗೆ ಒಳ್ಳೆಯದಾಗಲಿ...

ರವಿ-ಹಂಸ ಜೋಡಿ ಒಂದು ಕಾಲದಲ್ಲಿ ಚಿತ್ರರಸಿಕರಿಗೆ ಮೋಡಿ ಮಾಡಿತ್ತು. ಸೂರ್ಯಂಗೂ ಚಂದ್ರಂಗೂ ಮುನಿಸು ಬಂದಂಗೆ, ಇಬ್ಬರೂ ದೂರವಾದರು. ವೈಯಕ್ತಿಕವಾಗಿ ಇಬ್ಬರಿಗೂ ಮುನಿಸಿನಿಂದ ಎಷ್ಟು ನಷ್ಟವಾಯಿತೋ ಗೊತ್ತಿಲ್ಲ. ಸಂಗೀತ ಪ್ರೇಮಿಗಳಂತೂ ಪರಿತಪಿಸಿದರು.

ಕೋಳಿ ಜಗಳದಿಂದಾಗಿ ಈ ಅವಧಿಯಲ್ಲಿ ಹಂಸಲೇಖಗೆ ಹಿಟ್‌ ಹಾಡುಗಳನ್ನು ಕೊಡಲಾಗಲಿಲ್ಲ. ರವಿಚಂದ್ರನ್‌ ಸಂಗೀತ ನಿರ್ದೇಶಕರಾಗಿ ಹಿಟ್ಟು(?) ಹಾಡುಗಳನ್ನು ಕೊಟ್ಟರು! ಆ ಮೂಲಕ ಸಂಗೀತಪ್ರೇಮಿಗಳನ್ನು ಶೋಷಿಸಿದರು!

ಈಗ ವಿಚಾರ ಏನಪ್ಪಾ ಅಂದ್ರೆ, ಹಂಸಲೇಖ ತಮ್ಮ ಚಿತ್ರಬದುಕಿನ ಇನ್ನೊಂದು ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಂಗೀತ ನಿರ್ದೇಶಕರಾಗಿದ್ದ ಅವರೀಗ, ಚಿತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅವರು ನಿರ್ದೇಶಿಸಲಿರುವ ಚಿತ್ರದ ಹೆಸರು ‘ನಲ್ಮೆ’.

ಸ್ಯಾಂಡಲ್‌ವುಡ್‌ಗೆ 1993ರಲ್ಲಿ ‘ಬಾ ನಲ್ಲೆ ಮಧುಚಂದ್ರ’ ಚಿತ್ರದ ಮೂಲಕ ಮಿಂಚಿನ ಪ್ರವೇಶ ಪಡೆದಿದ್ದ ಐಎಎಸ್‌ ಅಧಿಕಾರಿ ಮತ್ತು ನಟ ಶಿವರಾಮ್‌, ‘ನಲ್ಮೆ’ ಚಿತ್ರದ ನಾಯಕರು(ಅವರ ಇತ್ತೀಚಿನ ಚಿತ್ರ ‘ನಾಗ’ ಸದ್ದಿಲ್ಲದೆ ಮಲಗಿದೆ). ಕೊಪ್ಪಳದ ಹಿರೇಮಠ್‌ ಚಿತ್ರದ ನಿರ್ಮಾಪಕರು.

ಐಟಿ ಸಂಸ್ಕೃತಿ ಮತ್ತು ದೇಸಿ ಸಂಸ್ಕೃತಿ ನಡುವಿನ ಸಂಘರ್ಷ ‘ನಲ್ಮೆ’ ಚಿತ್ರದಲ್ಲಿ ಪ್ರತಿಧ್ವನಿಸಲಿದೆ ಎಂದು ನಟ ಶಿವರಾಮ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada