»   » ಕುಣಿಯೋಣ ಬಾರಾ : ಪ್ರೇಮ್‌--ತರುಣ್‌ರ ಹೊಸ ಸಾಹಸ!

ಕುಣಿಯೋಣ ಬಾರಾ : ಪ್ರೇಮ್‌--ತರುಣ್‌ರ ಹೊಸ ಸಾಹಸ!

Subscribe to Filmibeat Kannada


ಮೊನ್ನೆಯಷ್ಟೇ ಅಂಗವಿಕಲ ಮಗುವೊಂದನ್ನು ದತ್ತು ಸ್ವೀಕರಿಸಿ ಸುದ್ದಿಯಲ್ಲಿದ್ದ ‘ನೆನಪಿರಲಿ’ ಖ್ಯಾತಿಯ ಪ್ರೇಮ್‌, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮ್ಮ ಜೀವದ ಗೆಳೆಯ ನಟ ತರುಣ್‌(ಸುಧೀರ್‌ ಪುತ್ರ) ಜೊತೆ ಸೇರಿ ನೃತ್ಯ ಶಾಲೆಯಾಂದನ್ನು ಪ್ರೇಮ್‌ ಆರಂಭಿಸುತ್ತಿದ್ದಾರೆ.

ಬಸವೇಶ್ವರ ನಗರದಲ್ಲಿ ಪ್ರೇಮ್‌ ಮತ್ತು ತರುಣ್‌ರ The magnesium dance studio ಏ.29ರಂದು ಆರಂಭಗೊಳ್ಳಲಿದೆ. ಡ್ಯಾನ್ಸ್‌ ಮಾಸ್ಟರ್‌ ಚಾಮರಾಜ್‌ ಮತ್ತು ದೇವರಾಜ್‌ ಇಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಯುವಕ ಯುವತಿಯರಲ್ಲಿನ ನೃತ್ಯ ಪ್ರತಿಭೆಗೆ ವೇದಿಕೆ ಕಲ್ಪಿಸುವುದು ಮತ್ತು ಪ್ರೋತ್ಸಾಹಿಸುವ ದೊಡ್ಡ ಉದ್ದೇಶವನ್ನು ಪ್ರೇಮ್‌-ತರುಣ್‌ ಎಂಬ ಆಪ್ತಮಿತ್ರರು ಹೊಂದಿದ್ದಾರೆ.

ಹೊರರಾಜ್ಯಗಳಿಂದ ನೃತ್ಯಪಟುಗಳನ್ನು ಕರೆಸುವ ಸ್ಥಿತಿ ನಾಡಿನಲ್ಲಿದೆ. ನೃತ್ಯ ಕಲಿಯುವ ಆಸಕ್ತಿಯುಳ್ಳವರಿಗೆ ಪೂರಕ ಮಾರ್ಗದರ್ಶನ ನೀಡುವುದು ನಮ್ಮ ಉದ್ದೇಶ. ಇಲ್ಲಿ ಶಾಸ್ತ್ರೀಯ ಮತ್ತು ಎಲ್ಲಾ ರೀತಿಯ ನೃತ್ಯಗಳನ್ನು ಕಲಿಸಲಾಗುತ್ತದೆ ಎಂದು ಪ್ರೇಮ್‌ ಹೇಳಿದ್ದಾರೆ.

ಆರಂಭದಲ್ಲಿ 20ದಿನಗಳ ನರ್ತನ ಶಿಬಿರವನ್ನು ಮಕ್ಕಳಿಗಾಗಿ ಏರ್ಪಡಿಸುತ್ತಿದ್ದೇವೆ. ಹೊಸ ಕನಸಿನೊಂದಿಗೆ ಯೋಜನೆ ಹಮ್ಮಿಕೊಂಡಿದ್ದೇವೆ. ಜನ ನಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಪ್ರೇಮ್‌ ಅಭಿಪ್ರಾಯಪಟ್ಟರು.

ಪ್ರೇಮ್‌ರ ಹೊಸಚಿತ್ರ ‘ಪಲ್ಲಕ್ಕಿ’ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada