»   » 30 ನವಜಾತ ಶಿಶುಗಳಿಗೆ ‘ಅಣ್ಣಾವ್ರ’ಹೆಸರಿಟ್ಟು ಶ್ರದ್ಧಾಂಜಲಿ

30 ನವಜಾತ ಶಿಶುಗಳಿಗೆ ‘ಅಣ್ಣಾವ್ರ’ಹೆಸರಿಟ್ಟು ಶ್ರದ್ಧಾಂಜಲಿ

Subscribe to Filmibeat Kannada


ಬೆಂಗಳೂರು : ನಟ ಡಾ.ರಾಜ್‌ಕುಮಾರ್‌ ಬಗ್ಗೆ ಜನರಿಗೆ ತೀರದ ಅಭಿಮಾನ. ಅವರ ಹುಟ್ಟುಹಬ್ಬ(ಏ.24)ದ ಹಿಂದೆ ಮುಂದೆ ಜನಿಸಿದ ತಮ್ಮ ಮಕ್ಕಳಿಗೆ, ರಾಜ್‌ಕುಮಾರ್‌ ಹೆಸರಿಟ್ಟು ಹೆತ್ತವರು ಸಂಭ್ರಮಿಸಿದ್ದಾರೆ.

ಏ.24ಮತ್ತು 25ರಂದು ಜನಿಸಿದ 30ಮಕ್ಕಳಿಗೆ ರಾಜ್‌ಕುಮಾರ್‌-/ರಾಜ್‌ಕುಮಾರಿ ಎಂದು ಹೆಸರಿಡಲಾಗಿದೆ. ಭಾರತೀನಗರ ನಿವಾಸಿಗಳ ಸಂಘ ಮತ್ತು ಕನ್ನಡ ಅಭಿಮಾನ ಸಂಘ ನಾಮಕರಣ ಕಾರ್ಯಕ್ರಮ ಏರ್ಪಡಿಸಿತ್ತು.

ಪಾರ್ವತಮ್ಮ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಮಾಲಾಶ್ರೀ, ಎನ್‌.ಎಸ್‌.ರವಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿನೂತನವಾಗಿ ರಾಜ್‌ ಹೆಸರನ್ನು ಅಜರಾಮರಗೊಳಿಸುವ ಸಂಕಲ್ಪ ಹೆತ್ತವರದು.

(ದಟ್ಸ್‌ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada