»   » ಪರ್ವ ಸೋಲು-ಡಬ್ಲ್ಯುಟಿಸಿ ಕಟ್ಟಡ ಉರುಳಿದಂತೆ

ಪರ್ವ ಸೋಲು-ಡಬ್ಲ್ಯುಟಿಸಿ ಕಟ್ಟಡ ಉರುಳಿದಂತೆ

Posted By: Staff
Subscribe to Filmibeat Kannada

ಸೋಲು ಅನ್ನುವ ಗುಂಡು ನನ್ನ ಎದೆಯನ್ನು ಚೂರು ಚೂರು ಮಾಡಿತು !
ಶಿಲ್ಪ ಶ್ರೀನಿವಾಸ್‌ ಘಾಸಿಗೊಂಡಿದ್ದಾರೆ. ನಿರೀಕ್ಷೆಗಳೆಲ್ಲಾ ಎಷ್ಟೋ ಸಲ ಬುಡ ಮೇಲಾಗಿ ಬಿಡುತ್ತವೆ. ನನ್ನನ್ನು ಯಾರೂ ಮುಟ್ಟಲಾಗದು ಎಂದು ಅಮೆರಿಕಾ ಬೀಗುತ್ತಿತ್ತು. ಕೊನೆಗೆ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಏನಾಯಿತು? ಪರ್ವ ಚಿತ್ರದ ಗತಿಯೂ ಅದೇ. ಟೈಟಲ್‌ ಕಾರ್ಡ್‌ ನೋಡಿಯೇ ಇಪ್ಪತ್ತೆೈದು ವಾರ ಓಡೋದು ಗ್ಯಾರಂಟಿ ಅನ್ನುವ ನನ್ನ ಲೆಕ್ಕಾಚಾರ ಸುಳ್ಳಾಯಿತು....

ನಿರ್ಮಾಪಕ ಶಿಲ್ಪ ಶ್ರೀನಿವಾಸ್‌ ನೋವಿನ ಮಾತುಗಳಿವು. ಪರ್ವ ಸೋಲನ್ನು ಅವರಿಗೆ ಇನ್ನೂ ಮರೆಯಲು ಆಗುತ್ತಿಲ್ಲ. ಐವತ್ತು ಶೋ ಕೂಡ ಓಡದ ಆ ಚಿತ್ರ ಕಟ್ಟಿ ಕೊಟ್ಟಿರುವುದೆಲ್ಲಾ ಕಹಿ ಅನುಭವಗಳನ್ನೇ. ಪ್ರೇಮಾ ವಿರುದ್ಧ ಸಿಟ್ಟಾಗುವಂತಹ ಪ್ರಕರಣ, ಡೆಡ್‌ಲೈನೇ ಇಲ್ಲದ ಶೆಡ್ಯೂಲ್‌ ಹೀಗೆ ಏನೆಲ್ಲಾ ಡ್ರಾಬ್ಯಾಕ್‌ಗಳು.

ಈಗ ಶಿಲ್ಪ ಪರ್ವದಲ್ಲಿ ಕಳಕೊಂಡದ್ದನ್ನು ಗಳಿಸುವ ಹುಮ್ಮಸ್ಸಿನಲ್ಲಿದ್ದಾರೆ. ಈ ನಿಟ್ಟಿನ ಮೊದಲ ಯತ್ನ 'ರೋಮಿಯೋ ಜೂಲಿಯಟ್‌". ಶೇಕ್ಸ್‌ಪಿಯರ್‌ ಅಜರಾಮರ ಅನ್ನುವುದಕ್ಕೆ ಇದೇ ಸಾಕ್ಷಿ. ಶಿಲ್ಪ ಈ ಕತೆಗೆ ಮೊರೆ ಹೋಗಲು ಮತ್ತೊಂದು ಕಾರಣ ಫ್ರೆಂಡ್ಸ್‌ನ ಯಶಸ್ಸು. ಸಿನಿಮಾದಲ್ಲಿ ಧಮ್ಮಿದ್ದರೆ ಜನಪ್ರಿಯ ಸ್ಟಾರ್‌ಕಾಸ್ಟ್‌ ಬೇಕಿಲ್ಲ ಎಂಬುದು ಶಿಲ್ಪಾಗೆ ತಡವಾಗಿ ಹೊಳೆದಿದೆ. ಅದಕ್ಕೇ 'ರೋಮಿಯೋ ಜೂಲಿಯಟ್‌"ನ ರೋಮಿಯೋ ವಿಜಯ ರಾಘವೇಂದ್ರ. ಮದುವೆ ತಕರಾರಿನಿಂದಲೇ ಸದ್ದು ಮಾಡುತ್ತಿರುವ ರಾಧಿಕಾ ಜೂಲಿಯಟ್‌.

ಸೆಟ್‌ನಲ್ಲಿ ಶಿಲ್ಪ ಖುಷಿಯಾಗಿದ್ದರು. ಒಂದೇ ಟೇಕ್‌ನಲ್ಲಿ ಓಕೆ ಮಾಡುವಷ್ಟರ ಮಟ್ಟಿಗೆ ರಾಧಿಕಾ ಅಭಿನಯ ಮೊನಚಾಗಿದೆ ಎಂಬುದು ಶಿಲ್ಪಾ ಶ್ರೀನಿವಾಸ್‌ಗೆ ಸಂತಸದ ವಿಷಯ. ಅದರ ಬೆನ್ನಲ್ಲೇ ಸಿಟಿ ಮಾರ್ಕೆಟ್‌ ಎಂಬ ಚಿತ್ರದಲ್ಲಿ ತಾವು ನಾಯಕರಾಗಲಿರುವ ಖುಷಿ. ಜುಲೈ 15ಕ್ಕೆ ಈ ಚಿತ್ರ ಸೆಟ್ಟೇರಲಿದೆ.

ಸುದೀಪ್‌ ನಾಯಕತ್ವದ ಹೊಸ ಚಿತ್ರವೂ ಶಿಲ್ಪ ಬತ್ತಳಿಕೆಯಲ್ಲಿದೆ. ಹೊಸತುಗಳ ಸಂಗಮ ಈ ಚಿತ್ರ ಎನ್ನುತ್ತಾರೆ ಶಿಲ್ಪ. ಬಾಲಿವುಡ್‌ನಲ್ಲಿ ಸಂಚಲನೆ ಹುಟ್ಟಿಸಿರುವ ಬೆಂಗಳೂರು ಹುಡುಗ ಸಂದೀಪ್‌ ಚೌಟ ಕೈಲಿ ಸಂಗೀತ ನಿರ್ದೇಶನ ಮಾಡಿಸುವುದು ಇವರ ಕನಸು. ಇದಲ್ಲದೆ ಮೀಸೆ ಕುಖ್ಯಾತಿಯ ಹಾಗೂ ಪರ್ವ ಪಾಚೊಂಡಿದ್ದರಲ್ಲಿ ಪಾಲುದಾರರಾಗಿರುವ ವಿಷ್ಣುವರ್ಧನ್‌ ಅಭಯ ಹಸ್ತ ಇವರಿಗೆ ಇನ್ನೂ ಇದೆ. ಈ ಕಾರಣಕ್ಕೆ ವಿಷ್ಣುಗಾಗೇ ವಿಭಿನ್ನ ಕತೆಯ ಹುಡುಕಾಟದಲ್ಲಿ ಶಿಲ್ಪ ತೊಡಗಿದ್ದಾರೆ. ಮೀಸೆ ಅಂಟಿಸುವುದರಲ್ಲಿ ಪಳಗಿರುವ ನಾರಾಯಣ್‌ ಅವರನ್ನು ಶಿಲ್ಪ ಭೇಟಿ ಮಾಡುವ ಮುನ್ನ

English summary
Romeo Juliet : Shilpa Srinivas venture after the disaster Parva
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada