»   » ದಯಾನಾಯಕ್‌ಗೆ ಬೆಳಗೆರೆ ಡೈಲಾಗ್‌

ದಯಾನಾಯಕ್‌ಗೆ ಬೆಳಗೆರೆ ಡೈಲಾಗ್‌

Posted By: Staff
Subscribe to Filmibeat Kannada
Ravi Belagere
ಎನ್‌ಕೌಂಟರ್‌ ಸ್ಪೆಷಲಿಸ್ಟ್‌ , ಮುಂಬಯಿ ಪೊಲೀಸ್‌ ಜಗತ್ತಿನ ದಂತಕಥೆ ದಯಾನಾಯಕ್‌ ಸಾಹಸಗಾಥೆಯ ಚಿತ್ರಗಳು ಈಗಾಗಲೇ ಎಲ್ಲಾ ಭಾಷೆಗಳಲ್ಲೂ ಬಂದು ಹೋಗಿವೆ. ಕಗಾರ್‌, ಅಬ್‌ ತಕ್‌ ಛಪ್ಪನ್‌ ಹಿಂದಿ ಚಿತ್ರಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಈಗ ಕನ್ನಡದ ಸರದಿ.

ಮೆಜೆಸ್ಟಿಕ್‌ ಮತ್ತು ಧರ್ಮ ಚಿತ್ರಗಳ ನಿರ್ಮಾಪಕರಾದ ರಾಮಮೂರ್ತಿ ಈಗ ದಯಾನಾಯಕ್‌ರನ್ನು ಕನ್ನಡಕ್ಕೆ ಕರೆತರುತ್ತಿದ್ದಾರೆ. ಚಿತ್ರದ ಹೆಸರೂ ದಯಾನಾಯಕ್‌.

ದಯಾನಾಯಕ್‌ ವಿಶೇಷತೆ ಏನೆಂದರೆ- ದಟ್ಸ್‌ಕನ್ನಡದೊಂದಿಗೆ ಸ್ನೇಹಸಂಪರ್ಕ ಹೊಂದಿರುವ ಹಾಯ್‌ ಬೆಂಗಳೂರ್‌! ಪತ್ರಿಕೆಯ ಸಂಪಾದಕ ರವಿ ಬೆಳಗೆರೆಯವರ ಸಂಭಾಷಣೆ. ಸಿನಿಮಾ ಎಂದರೆ ಸಾಮಾನ್ಯವಾಗಿ ದೂರವಿರುವ ಬೆಳಗೆರೆ, ದಯಾನಾಯಕ್‌ಗೆ ಮಾತು ಬರೆಯಲು ಹೂಂಗುಟ್ಟಿದ್ದಾರೆ.

ಭೂಗತ ಲೋಕ ಬೆಳಗೆರೆಗೆ ಅಂಗೈಗೆರೆಗಳಷ್ಟು ಸ್ಪಷ್ಟ. ಮುಂಬೈ ಭೂಗತ ಲೋಕದ ಬಗ್ಗೆಯೂ ಅವರಲ್ಲಿ ಸಾಕಷ್ಟು ಮೆಟೀರಿಯಲ್‌ ಇದೆ. ಹೀಗಾಗಿ ಬೆಳಗೆರೆ ಸಂಭಾಷಣೆ ಚಿತ್ರಕ್ಕೆ ಕಳೆಕಟ್ಟುವ ನಿರೀಕ್ಷೆಯಿದೆ. ಇನ್ನು , ಮುಂಬಯಿ ಭೂಗತ ಲೋಕಕ್ಕೆ 1970 ರಿಂದ ಪ್ರಾರಂಭವಾದ ಇತಿಹಾಸವಿದೆ. ಇದನ್ನೆಲ್ಲ ತಲೆಯಲ್ಲಿಟ್ಟುಕೊಂಡು ಮೈಸೂರು ಹರೀಶ್‌ ಕಥೆ ಹೊಸೆದಿದ್ದಾರೆ.

English summary
Dayanayak in Kannada ! Dialogues by Ravi Belagere, Hai Bengalore !
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada