»   » ನೆಚ್ಚಿನ ಕಾವ್ಯ ಉರುಫ್‌ ಋತು ಆತ್ಮಹತ್ಯೆಗೆ ಯತ್ನಿಸಿದ್ದಾರೆ

ನೆಚ್ಚಿನ ಕಾವ್ಯ ಉರುಫ್‌ ಋತು ಆತ್ಮಹತ್ಯೆಗೆ ಯತ್ನಿಸಿದ್ದಾರೆ

Posted By: Super
Subscribe to Filmibeat Kannada

ಅಭಿಮಾನಿಗಳ ನೆಚ್ಚಿನ ಕಾವ್ಯಾಂಜಲಿ ಧಾರಾವಾಹಿಯ ಕಾವ್ಯ ಪಾತ್ರಧಾರಿ ಋತು ಭಾನುವಾರ ಆತ್ಮಹತ್ಯೆಯ ವಿಫಲ ಯತ್ನ ನಡೆಸಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ಕಾರಣ ಇನ್ನೂ ನಿಗೂಢ.

ನಡೆದದ್ದೇನು?
ಬಿಡದಿ ಬಳಿಯ ಕೃಷ್ಣಕುಮಾರಿ ಎಸ್ಟೇಟಿಗೆ ಎಂದಿನಂತೆ ಭಾನುವಾರವೂ ಶೂಟಿಂಗ್‌ ಹೊರಟಿದ್ದ ಋತು, ಮಾರ್ಗ ಮಧ್ಯೆಯೇ ಕಾರಿನಲ್ಲಿ ನಿದ್ದೆ ಮಾತ್ರೆ ತೆಗೆದುಕೊಂಡು, ನಾಡಿ ಕತ್ತರಿಸಿಕೊಂಡಿದ್ದಾರೆ. ಕಾರಿನ ಡ್ರೆೃವರ್‌ ಇದನ್ನು ಕಂಡ ತಕ್ಷಣ ಪೊಲೀಸರಿಗೆ ತಿಳಿಸಿದ್ದಾನೆ. ಹತ್ತಿರದ ಆಸ್ಪತ್ರೆಗೂ ಸೇರಿಸಿದ್ದಾನೆ. ಇನ್ನು ಸ್ವಲ್ಪ ಹೊತ್ತು ತಡವಾಗಿದ್ದರೆ ಋತು ಉಳಿಯುತ್ತಿರಲಿಲ್ಲ. ಆತ್ಮಹತ್ಯೆಗೆ ಏನು ಕಾರಣ ಅನ್ನೋದು ಪೊಲೀಸರಿಗೂ ಗೊತ್ತಾಗಿಲ್ಲ.

ಋತು ತೆರೆಗೆ ಬರುವ ಹಿಂದೆ...

ವರ್ಷಗಳ ಹಿಂದಿನ ಮಾತು. ಋತು ಅವರಪ್ಪ ಕನ್ನಡ ಸಿನಿಮಾ ನಿರ್ಮಾಣಕ್ಕೆ ಕೈಹಾಕುವ ಯತ್ನ ಮಾಡಿ, ಕೈಸುಟ್ಟುಕೊಂಡರು. ಋತು ಕೂಡ ಸಿನಿಮಾದಲ್ಲಿ ಚಾನ್ಸ್‌ ಗಿಟ್ಟಿಸಿಕೊಳ್ಳಲು ಹಾತೊರೆಯುತ್ತಿದ್ದ ಕಾಲವದು. ಆದರೆ ಈಕೆಗೆ ಅಪ್ಪನ ಸಪೋರ್ಟೇ ಸಿಗಲಿಲ್ಲ. ದುಡ್ಡು ಕಳಕೊಂಡ ಕೋಪಕ್ಕೆ ಮಗಳನ್ನು ದೂರ ಇಟ್ಟರು. ಅದೇ ಛಲಕ್ಕೋ ಏನೋ ಋತು ಅದೃಷ್ಟ ಖುಲಾಯಿಸಿತು. ಕಿರಿತೆರೆ ತಬ್ಬಿಕೊಂಡಿತು. ಈ ನಡುವೆ ಮಾವ ಮಾವ ಮದುವೆ ಮಾಡು ಎಂಬ ಕಾಶೀನಾಥ್‌ ಸಿನಿಮಾದಲ್ಲಿ ಸೆರಗು ಕಿತ್ತು ಹಾಕಿ ಕುಣಿದಾಡಿದರೂ, ಸಿನಿಮಾ ಈಕೆಯನ್ನು ಒಪ್ಪಿಕೊಳ್ಳಲಿಲ್ಲ.

ಕಾವ್ಯಾಂಜಲಿ ಅಂದೊಡನೆ ಜನಮನದಲ್ಲಿ ಇವತ್ತು ಋತು ಕಾಣಿಸುತ್ತಾರೆ. ಶರಪಂಜರ ಮತ್ತು ಸಪ್ತಪದಿ ಎಂಬ ಧಾರಾವಾಹಿಗಳಲ್ಲೂ ಋತು ಹಿಟ್‌. ಈಕೆಯ ಅಫೇರ್‌ ಬಗ್ಗೆ ಯಾವುದೇ ಗಾಳಿಸುದ್ದಿ ಕೂಡ ಇಲ್ಲ. ಹೀಗಿದ್ದೂ ಋತು ಆತ್ಮಹತ್ಯೆಗೆ ಕಾರಣವೇನು?

English summary
Serial actress Rutu fails in a bid to end her life

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X