»   » ಇಂಡಿಯನ್‌ಗೆ ಕ್ಯಾಮೆರಾ ಹಿಡಿದಿದ್ದ ಜೀವಾ ಇನ್ನು ನೆನಪು!

ಇಂಡಿಯನ್‌ಗೆ ಕ್ಯಾಮೆರಾ ಹಿಡಿದಿದ್ದ ಜೀವಾ ಇನ್ನು ನೆನಪು!

Subscribe to Filmibeat Kannada


ಚೆನ್ನೈ : ಜಂಟಲ್ ಮನ್, ಕಾದಲನ್, ಇಂಡಿಯನ್ ಮತ್ತಿತರ ತಮಿಳಿನ ಜನಪ್ರಿಯ ಚಿತ್ರಗಳ ಛಾಯಾಗ್ರಾಹಕ ಜೀವಾ(43) ಹೃದಯಾಘಾತಕ್ಕೆ ರಷ್ಯಾದಲ್ಲಿ ಬಲಿಯಾಗಿದ್ದಾರೆ.

ಬುಧವಾರ ಅವರ ಪಾರ್ಥಿವ ಶರೀರವನ್ನು ಅಂತ್ಯ ಸಂಸ್ಕಾರಕ್ಕಾಗಿ ರಷ್ಯಾದಿಂದ, ಚೆನ್ನೈಗೆ ತರುವ ನಿರೀಕ್ಷೆ ಇದೆ.

ಕ್ಯಾಮರಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು, ತಮಿಳು ಚಿತ್ರ ಧೂಮ್ ಧೂಮ್ ಚಿತ್ರೀಕರಣಕ್ಕಾಗಿ ಇತ್ತೀಚೆಗೆ ಮಾಸ್ಕೋಕ್ಕೆ ಬಂದಿದ್ದರು. ಈ ಚಿತ್ರದಲ್ಲಿ ರವಿ ಮತ್ತು ಕಂಗನಾ ರಾವತ್ ಪ್ರಮುಖ ಪಾತ್ರದಲ್ಲಿದ್ದಾರೆ.

ಛಾಯಾಗ್ರಾಹಕರಾಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಜೀವಾ, ತಮಿಳು ಚಿತ್ರಪ್ರೇಮಿಗಳ ಗಮನ ಸೆಳೆದಿದ್ದರು. ಇವರು ನಿರ್ದೇಶಿಸಿದ 12B ಹಾಗೂ ಇತ್ತೀಚಿನ ಉನ್ನಾಲೆ ಉನ್ನಾಲೆ ಚಿತ್ರಗಳು ಯಶಸ್ವಿ ಪ್ರದರ್ಶನ ಕಂಡಿದ್ದವು.40ಚಿತ್ರಗಳಿಗೆ ಅವರು ಕ್ಯಾಮೆರಾ ಹಿಡಿದಿದ್ದರು.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada