»   » ಶಿಲ್ಪ ಶೆಟ್ಟಿಗೂ, ಸಂದೀಪ್‌ ಚೌಟಾಗೂ ಮದುವೆಯಂತೆ

ಶಿಲ್ಪ ಶೆಟ್ಟಿಗೂ, ಸಂದೀಪ್‌ ಚೌಟಾಗೂ ಮದುವೆಯಂತೆ

Posted By: Staff
Subscribe to Filmibeat Kannada

ಬೆಂಗಳೂರು ಹುಡುಗ ಸಂದೀಪ್‌ ಚೌಟ ಮತ್ತು ಮಂಗಳೂರು ಹುಡುಗಿ ಶಿಲ್ಪಶೆಟ್ಟಿಗೆ ಮದ್ವೆಯಂತೆ. ಬಾಲಿವುಡ್‌ ಓಣಿಗಳಲ್ಲೆಲ್ಲಾ ಇದೇ ಸದ್ದು. ಆದರೆ ಅದನ್ನು ಕನ್ಫರ್ಮ್‌ ಮಾಡಲು ಚೌಟ ಆಗಲೀ, ಶಿಲ್ಪ ಆಗಲಿ ಸಿಗುತ್ತಿಲ್ಲ.

ರವಿಚಂದ್ರನ್‌ ಜೊತೆ 'ಪ್ರೀತ್ಸೋದ್‌ ತಪ್ಪಾ" ಅಂದ ಶಿಲ್ಪಾ ಶೆಟ್ಟಿಗೆ ಈಗ ಮೊದಲಿನಂತೆ ಮಾರುಕಟ್ಟೆಯಿಲ್ಲ. ಆದರೆ ಸಂದೀಪ್‌ ಚೌಟ ಮುಟ್ಟಿದ್ದೆಲ್ಲಾ ಚಿನ್ನ. ಮಸ್ತ್‌, ಸತ್ಯ ಮತ್ತು ಕಂಪನಿ ಚಿತ್ರಗಳ ಸಂಗೀತಗಳೇ ಇದಕ್ಕೆ ಸಾಕ್ಷಿ. ಕನ್ನಡಕ್ಕೆ ಈತನನ್ನು ಕರೆ ತರುವ ಯತ್ನಗಳೂ ವಿಫಲವಾಗಿವೆ. ಯಾಕೆಂದರೆ, ಚೌಟ ಫೀಸು ತರುವ ಶಕ್ತಿ ನಮ್ಮ ನಿರ್ಮಾಪಕರಿಗಿಲ್ಲ. ಜೊತೆಗೆ ಚೌಟ ಈಸ್‌ ಟೂ ಬ್ಯುಸಿ ಅಂತ ಆತನ ಸೆಕ್ರೆಟರಿ ಹೇಳಿದ್ದಾರಂತೆ.

ಈ ಇಬ್ಬರ ನಡುವೆ ಅದ್ಯಾವ ಗಳಿಗೆಯಲ್ಲಿ ಪ್ರೇಮಾಂಕುರವಾಯಿತೋ ಗೊತ್ತಿಲ್ಲ. ಕೆಲವು ವರ್ಷಗಳ ಹಿಂದೆ ಅಕ್ಷಯ್‌ ಕುಮಾರ್‌ ಜೊತೆಯಲ್ಲಿ ಲಲ್ಲೆ ಹೊಡೆಯುತ್ತಿದ್ದಾಳೆ ಅಂತ ಶಿಲ್ಪ ಫೋಟೋ ಹಾಕಿ ಪತ್ರಿಕೆಗಳು ಹುಯಿಲೆಬ್ಬಿಸಿದ್ದವು. ಕೊನೆಗೆ ಅಕ್ಷಯ್‌ ಟ್ವಿಂಕಲ್‌ ಖನ್ನಾ ಜೊತೆ ಮದುವೆಯಾಗಿ ಇದನ್ನು ಹುಸಿಯಾಗಿಸಿದರು. ತೊದಲು ಕನ್ನಡ ಮಾತಾಡಬಲ್ಲ ಶಿಲ್ಪ ತಮ್ಮ ಚಿಕ್ಕ ಪುಟ್ಟ ಅಸೈನ್‌ಮೆಂಟ್‌ಗಳನ್ನೆಲ್ಲಾ ಬೇಗ ಪೂರೈಸುತ್ತಿದ್ದಾರೆ. ಚೌಟ ಕೂಡ ಹುಡುಕಿಕೊಂಡು ಬರುತ್ತಿರುವ ಎಲ್ಲಾ ಪ್ರಾಜೆಕ್ಟ್‌ಗಳನ್ನೂ ಒಪ್ಪಿಕೊಳ್ಳುತ್ತಿಲ್ಲವಂತೆ. ಮೊದಲು ಬಿಡುವು ಮಾಡಿಕೊಂಡು, ಆಮೇಲೆ ಮದುವೆಯ ಮುಹೂರ್ತ ಇಟ್ಕೋತಾರಂತೆ.

English summary
Shilpa Shetty to tie knot with Sandeep Chowta

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada