»   » ಸ್ಯಾಂಡಲ್‌ವುಡ್‌ನಲ್ಲಿ ಶುಭ ಕಾಲ !

ಸ್ಯಾಂಡಲ್‌ವುಡ್‌ನಲ್ಲಿ ಶುಭ ಕಾಲ !

Subscribe to Filmibeat Kannada

‘ಹಸೀನಾ’, ‘ಬೇರು’ ಚಿತ್ರಗಳು ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿದರೆ, ಬರಗೂರರ ‘ಶಾಂತಿ’ ಗಿನ್ನಿಸ್‌ ಪ್ರವೇಶಿಸಿದೆ. ಈ ನಡುವೆ ಅಮಿತಾಭ್‌, ಕಮಲಹಾಸನ್‌ ಸ್ಯಾಂಡಲ್‌ವುಡ್‌ನಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡ ಚಿತ್ರಗಳಿಗೆ ಸಂಗೀತ ನೀಡಲು ರೆಹಮಾನ್‌ ಆಸಕ್ತಿ ತೋರಿಸಿದ್ದಾರೆ. ಸೋಲಿನ ಸರಣಿಯಿಂದ ಹೊರಬಂದ ಸ್ಯಾಂಡಲ್‌ವುಡ್‌ ನಿರ್ಮಾಪಕರ ಜೇಬು ತುಂಬಿಸುತ್ತಿದೆ. ಹೀಗಿರಬೇಕಾದ್ರೆ, ಶುಭ ಕಾಲ ಬಂದೈತೆ ಅಂದ್ರೆ ತಪ್ಪಾಗುವುದಿಲ್ಲ.

‘ವರ್ಷ’, ‘ಜೋಕ್‌ಫಾಲ್ಸ್‌’, ‘ರಿಷಿ’, ‘ರಾಕ್ಷಸ’, ‘ಅಯ್ಯ’ ಚಿತ್ರಗಳು ಶತದಿನ ಪೂರೈಸಿವೆ. ‘ಆಕಾಶ್‌’, ‘ಗೌರಮ್ಮ’, ‘ಶಾಸ್ತ್ರಿ’ ಚಿತ್ರಗಳು ಸೂಪರ್‌ ಹಿಟ್‌ ಲಿಸ್ಟ್‌ಗೆ ಸೇರಿಕೊಂಡಿವೆ. ರವಿಚಂದ್ರನ್‌ನ ಬಹುದಿನದ ಕನಸು ‘ಅಹಂ ಪ್ರೇಮಾಸ್ಮಿ’ ನೂರು ದಿನದತ್ತ ಸಾಗುತ್ತಿದೆ.

ಬಿಡುಗಡೆಯ ದಾರಿಯಲ್ಲಿರುವ ಜೋಗಿ, ಆಟೋಶಂಕರ್‌, ನಮ್ಮ ಬಸವ, ಮಠ, ಉಪ್ಪಿದಾದಾ ಎಂ.ಬಿ.ಬಿ.ಎಸ್‌, ವಾಲ್ಮೀಕಿ, ನ್ಯೂಸ್‌, ಪಾಂಡು ರಂಗ ವಿಠಲ, ರಾಮ ಶಾಮ ಭಾಮ, ಅಮೃತಧಾರೆ, ಮೈ ಆಟೋಗ್ರಾಫ್‌ ಚಿತ್ರಗಳು ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ್ದು, ಸೂಪರ್‌ಹಿಟ್‌ ಆಗುವ ಲಕ್ಷಣಗಳಿವೆ.

ಕಡಿಮೆ ಬಜೆಟ್‌ನ ಓ ಗುಲಾಬಿಯೇ, ಮಿಸ್ಟರ್‌ ಬಕ್ರಾ, ನವಭಾರತಿ, ಮಸಾಲಾ ಚಿತ್ರಗಳು ಸಹಾ ಹಣ ಗಳಿಕೆಯಲ್ಲಿ ಗೆದ್ದಿವೆ. ಈಗ ಕನ್ನಡ ಚಿತ್ರರಂಗ ಪ್ರಕಾಶಿಸುತ್ತಿದೆ!

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada