»   » ಕವಿತಾ ಲಂಕೇಶ್ ಸಿನಿಮಾದಲ್ಲಿ ಸಚಿವ ಎಂ.ಪಿ.ಪ್ರಕಾಶ್!

ಕವಿತಾ ಲಂಕೇಶ್ ಸಿನಿಮಾದಲ್ಲಿ ಸಚಿವ ಎಂ.ಪಿ.ಪ್ರಕಾಶ್!

Posted By: Staff
Subscribe to Filmibeat Kannada

ಬೆಂಗಳೂರು, ಜುಲೈ 27: ಇನ್ನೊಬ್ಬ ರಾಜಕಾರಣಿ, ಕನ್ನಡ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ. ಅವರ ಹೆಸರು ಎಂ.ಪಿ.ಪ್ರಕಾಶ್!

ಕವಿತಾ ಲಂಕೇಶ್ ನಿರ್ದೇಶನದ ಮುಸ್ಸಂಜೆಚಿತ್ರದಲ್ಲಿ ಎಂ.ಪಿ.ಪ್ರಕಾಶ್ ಗೊಂದು ಮುಖ್ಯಪಾತ್ರವಿದೆ. ದುನಿಯಾ ವಿಜಯ್ ಚಿತ್ರದ ನಾಯಕ.ಹೊಸ ಹುಡುಗಿ ಸ್ಮಿತಾ ನಾಯಕಿ. ಈ ಚಿತ್ರದ ಇನ್ನೊಂದು ಪ್ರಮುಖ ಪಾತ್ರದಲ್ಲಿ ಶ್ರುತಿ ನಟಿಸಲಿದ್ದಾರೆ. ಆ.13ರಂದು ಚಿತ್ರ ಸೆಟ್ಟೇರಲಿದೆ.

ಅಪ್ಪಮಕ್ಕಳ ರಾಜಕಾರಣದ ಮಧ್ಯೆ ಜೆಡಿಎಸ್ ನಲ್ಲಿ ಪ್ರಕಾಶ್ ಗೆ ಕೆಲಸವಿಲ್ಲದಂತಾಗಿದೆ. ಹೀಗಾಗಿ ಅವರು ಸಿನಿಮಾ, ನಾಟಕ ಎಂದು ಸುತ್ತಾಡುತ್ತಿದ್ದಾರೆ ಎಂದು ಕಾಂಗ್ರೆಸ್ಸಿಗರು ಮುಸಿಮುಸಿ ನಗುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

English summary
Home Minister M.P. Prakash will be playing an important role in Kannada movie Mussanje.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada