»   » ಸುಚಿತ್ರಾದಲ್ಲಿ ವಾರಾಂತ್ಯ ಸಿನಿಮಾ

ಸುಚಿತ್ರಾದಲ್ಲಿ ವಾರಾಂತ್ಯ ಸಿನಿಮಾ

Subscribe to Filmibeat Kannada

ಬೆಂಗಳೂರು : ಸಿನಿಮಾ ಚಟುವಟಿಕೆಗಳಿಗೆ ಮೀಸಲಾದ ಸುಚಿತ್ರಾ ಸಿನಿಮಾ ಅಕಾಡೆಮಿ ವಾರಾಂತ್ಯ ಸಿನಿಮಾ ಪ್ರದರ್ಶನ ಕಾರ್ಯಕ್ರಮವನ್ನು ಆರಂಭಿಸಿದೆ.

ತನ್ನ 32 ನೇ ವಾರ್ಷಿಕೋತ್ಸವದ ಅಂಗವಾಗಿ ವಾರಾಂತ್ಯ ಸಿನಿಮಾ ಕಾರ್ಯಕ್ರಮವನ್ನು ಸುಚಿತ್ರಾ ಹಮ್ಮಿಕೊಂಡಿದ್ದು - ಈ ವಾರಾಂತ್ಯ ಸಿನಿಮಾ ಕಾರ್ಯಕ್ರಮ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಹಾಗೂ ರಾಷ್ಟ್ರೀಯ ಮಕ್ಕಳ ಚಿತ್ರ ಸಮಾಜದ ಸಹಯೋಗದೊಂದಿಗೆ ನಡೆಯಲಿದೆ ಎಂದು ಸುಚಿತ್ರಾ ಪರವಾಗಿ ಖ್ಯಾತ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಹಾಗೂ ಶ್ರೀನಿವಾಸ್‌ ತಿಳಿಸಿದ್ದಾರೆ.

ಪ್ರಾರಂಭದಲ್ಲಿ ಉತ್ತಮ ಹಾಗೂ ಪ್ರಶಸ್ತಿ ವಿಜೇತ ಕನ್ನಡ ಸಿನಿಮಾಗಳನ್ನು ಮಾತ್ರ ಪ್ರದರ್ಶಿಸಲಾಗುವುದು. ನಂತರದ ದಿನಗಳಲ್ಲಿ ಇತರ ಭಾಷೆಯ ಶ್ರೇಷ್ಠ ಚಿತ್ರಗಳನ್ನೂ ಪ್ರದರ್ಶಿಸಲಾಗುವುದು. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಚಲನಚಿತ್ರಕ್ಕೆ 25 ರುಪಾಯಿ ಹಾಗೂ ಮಕ್ಕಳ ಚಿತ್ರ ಸಮಾಜದ ಸಿನಿಮಾಗಳಿಗೆ 5 ರುಪಾಯಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ.

ವಾರಾಂತ್ಯ ಸಿನಿಮಾ ಪ್ರದರ್ಶನದ ಮೂಲಕ ಹೊಸ ಅಧ್ಯಾಯವೊಂದು ಪ್ರಾರಂಭವಾಗುತ್ತಿದ್ದು , ಪ್ರಸ್ತುತ ಇಂಥ ಕಾರ್ಯಕ್ರಮ ಕೋಲ್ಕತ್ತಾ ಹಾಗೂ ಮುಂಬಯಿ ಮಹಾನಗರಗಳಲ್ಲಿ ಮಾತ್ರ ನಡೆಯುತ್ತಿದೆ ಎಂದು ಕಾಸರವಳ್ಳಿ-ಶ್ರೀನಿವಾಸ್‌ ಹೇಳಿದರು.

ಆಸಕ್ತರು ಟಿಕೇಟುಗಳನ್ನು ಕಾದಿರಿಸಲು ಅವಕಾಶವಿದೆ. ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ : ಸುಚಿತ್ರಾ, ಬನಶಂಕರಿ ಎರಡನೇ ಹಂತ, 9ನೇ ಮುಖ್ಯರಸ್ತೆ , ಬೆಂಗಳೂರು. ದೂರವಾಣಿ ಸಂಖ್ಯೆ- (080) 6711785.

ಅಂದಹಾಗೆ, ಆಗಸ್ಟ್‌ 28ರಂದು ನಡೆಯುವ ಕಾರ್ಯಕ್ರಮದಲ್ಲಿ ಸಚಿವ ಅಲ್ಲಂ ವೀರಭದ್ರಪ್ಪ ವಾರಾಂತ್ಯ ಸಿನಿಮಾ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada