»   » ಜಾಮೀನು ಸಿಗುತ್ತೋ ಇಲ್ವೋ? ಸಲ್ಮಾನ್ ಗೆ ನಿದ್ದೆಯಿಲ್ಲ!

ಜಾಮೀನು ಸಿಗುತ್ತೋ ಇಲ್ವೋ? ಸಲ್ಮಾನ್ ಗೆ ನಿದ್ದೆಯಿಲ್ಲ!

Subscribe to Filmibeat Kannada


ಜೋಧ್ ಪುರ್, ಆಗಸ್ಟ್ 27 : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ರಾಜಸ್ಥಾನ ಹೈಕೋರ್ಟ್ , ಬುಧವಾರಕ್ಕೆ ಮುಂದೂಡಿದೆ.

ಸೋಮವಾರ ಜಾಮೀನು ಸಿಗಬಹುದೆಂಬ ಸಲ್ಮಾನ್ ನಿರೀಕ್ಷೆ ಹುಸಿಯಾಗಿದೆ. ಶನಿವಾರ ರಾಜಸ್ಥಾನ ಪೊಲೀಸರಿಗೆ ಶರಣಾದ ಸಲ್ಮಾನ್, ಈಗಾಗಲೇ ಜೋಧ್ ಪುರದ ಜೈಲಿನಲ್ಲಿ ಎರಡು ರಾತ್ರಿ ಕಳೆದಿದ್ದಾರೆ.

1998ರ ಸೆಪ್ಟೆಂಬರ್ 28ರಂದು ಘೋಡಾ ಫಾರ್ಮ್ ನಲ್ಲಿ ಚೀಂಕರ ಕೃಷ್ಣಮೃಗವನ್ನು ಬೇಟೆಯಾಡಿ ಕೊಂದಿದ್ದರು. ಹಮ್ ಸಾಥ್ ಸಾಥ್ ಹೈ ಚಿತ್ರೀಕರಣಕ್ಕೆ ಆಗಮಿಸಿದ್ದ ಸಲ್ಮಾನ್, ಕೃಷ್ಣ ಮೃಗವನ್ನು ಬೇಟೆಯಾಡಿದಾಗ ಸಹ ಕಲಾವಿದರಾದ ಸೈಫ್ ಅಲಿ ಖಾನ್ ಪಟೌಡಿ, ತಬು, ಸೊನಾಲಿ ಬೇಂದ್ರೆ ಜೊತೆಯಲ್ಲಿದ್ದರು. ಇವರಿಗೂ ಶಿಕ್ಷೆಯ ಕರಿನೆರಳು ಆವರಿಸುವ ಸಾಧ್ಯತೆಯಿದೆ.

ಸದ್ಯ ಸಲ್ಮಾನ್ ಖಾನ್ ಐದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

(ಏಜನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada