»   » ಆಸ್ಕರ್‌ ಸ್ಪರ್ಧೆಗೆ ‘ಪಹೇಲಿ’ : ಪ್ರಶಸ್ತಿ ನಿರೀಕ್ಷೆಯಲ್ಲಿ ಭಾರತ

ಆಸ್ಕರ್‌ ಸ್ಪರ್ಧೆಗೆ ‘ಪಹೇಲಿ’ : ಪ್ರಶಸ್ತಿ ನಿರೀಕ್ಷೆಯಲ್ಲಿ ಭಾರತ

Subscribe to Filmibeat Kannada

ಮುಂಬಯಿ : ವಿಶ್ವ ಸಿನಿಮಾಲೋಕದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್‌ಗೆ, ಹಿಂದಿಯ ‘ಪಹೇಲಿ’ ಚಿತ್ರ ನಾಮಕರಣಗೊಂಡಿದೆ.

ಇಲ್ಲಿಯತನಕ ಭಾರತದ ಯಾವುದೇ ಚಿತ್ರಗಳೂ ಈ ಪ್ರಶಸ್ತಿ ಪಡೆದಿಲ್ಲ. ಹಾಗಾಗಿ ನಾಮಕರಣ ಹೊಂದುವುದೇ ಪ್ರಶಸ್ತಿ ಪಡೆದಂತೆ ಎಂಬ ಸಂಪ್ರದಾಯ ನಿರ್ಮಾಣವಾಗಿದೆ.

ಈ ಮೊದಲು ತಮಿಳಿನ ಅಂಜಲಿ, ಹಿಂದಿಯ ಲಗಾನ್‌, ದೇವದಾಸ್‌ ಮುಂತಾದ ಚಿತ್ರಗಳು ಪ್ರಶಸ್ತಿ ಪಡೆಯಲು, ವಿದೇಶೀ ಚಿತ್ರಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದವು.

ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಲಾಬಿ ನಡೆಯುತ್ತದೆ ಎಂಬ ಸುದ್ದಿ ಯಾವಾಗಲೂ ಕೇಳಿಬರುತ್ತದೆ. ಆದರೆ ಅಮೋಲ್‌ ಪಾಲೇಕರ್‌ ನಿರ್ದೇಶನದ ಈ ಚಿತ್ರ, ಆಸ್ಕರ್‌ ಪ್ರಶಸ್ತಿ ಪಡೆಯಬಹುದೇನೋ ಎಂದು ಭಾರತೀಯರು ಮತ್ತೊಮ್ಮೆ ಎದುರು ನೋಡುತ್ತಿದ್ದಾರೆ.

ಈ ಚಿತ್ರದ ನಾಯಕರಾಗಿರುವ ಶಾರುಖ್‌ ಖಾನ್‌, ಇದರ ನಿರ್ಮಾಪಕರೂ ಹೌದು. ನಾಯಕಿಯ ಪಾತ್ರದಲ್ಲಿ ರಾಣಿ ಮುಖರ್ಜಿ ಕಾಣಿಸಿಕೊಂಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗ, ನಾಟಕಕಾರ ಗಿರೀಶ್‌ ಕಾರ್ನಾಡ್‌ ಅವರ ‘ನಾಗಮಂಡಲ’ ಕಥೆಯ ಎಳೆಯನ್ನು ಕದ್ದು ಈ ಚಿತ್ರ ಮಾಡಲಾಗಿದೆ ಎಂಬ ಕೂಗು ಈ ಹಿಂದೆ ಕೇಳಿಬಂದಿತ್ತು.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada