»   » ಕನ್ನಡತಿ ರೇಖಾ ಅಲ್ಲೇ ಸೆಟ್ಲಾಗಲು ನಿರ್ಧರಿಸಿದ್ದಾರೆ !

ಕನ್ನಡತಿ ರೇಖಾ ಅಲ್ಲೇ ಸೆಟ್ಲಾಗಲು ನಿರ್ಧರಿಸಿದ್ದಾರೆ !

Posted By: Super
Subscribe to Filmibeat Kannada

ರಾಮೋಜಿ ರಾಯರು ರೇಖಾ ಎಂಬ ಕನ್ನಡದ ಜಿಂಕೆಮರಿಯನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿ, ಹೈಜಾಕ್‌ ಮಾಡಿ ಸೀದಾ ತೆಲುಗು ಸಿನಿಮಾ ಇಂಡಸ್ಟ್ರಿಗೆ ಕರಕೊಂಡು ಹೋದರು. ಈಕೆ ನಟಿಸಿದ 'ಆನಂದಂ" ಎಂಬ ತೆಲುಗು ಚಿತ್ರ ಯಶಸ್ವಿಯೂ ಆಯಿತು. ಆನಂತರ 'ಜಾಬಿಲಿ" ಅನ್ನುವ ಇನ್ನೊಂದು ಚಿತ್ರ ತಾಚೊಂಡಿತು. ಹೀಗಿದ್ದೂ ರೇಖಾಗೆ ಟಾಲಿವುಡ್‌ನಲ್ಲಿ ಅವಕಾಶಗಳಿಗೇನೂ ಕೊರತೆಯಿಲ್ಲ. ಅದ್ಯಾರೋ ಪುಣ್ಯಾತ್ಮರು ಈಕೆ ಥೇಟ್‌ ಐಶ್ವರ್ಯ ರೈ ಥರಾನೇ ಇದಾಳೆ ಅನ್ನುವ ಪುಗ್ಗ ಬಿಟ್ಟಿರುವುದೇ ಇದಕ್ಕೆ ಕಾರಣ. ಐಶ್ವರ್ಯ ತುಟ್ಟಿ, ಈಕೆ ಅಗ್ಗ ಅನ್ನುವ ಕಾರಣಕ್ಕೆ ಟಾಲಿವುಡ್‌ ನಿರ್ಮಾಪಕರು ರೇಖಾ ಹಿಂದೆ ಕಾಲ್‌ಷೀಟ್‌ಗೆ ಅಲೆಯುತ್ತಿದ್ದಾರೆ !

ಇದು ಯಾವ ಮಟ್ಟಕ್ಕಿದೆಯೆಂದರೆ, ರೇಖಾ ಸೆಟ್ಲಾಗೋದೇ ಆದರೆ ಅದು ಟಾಲಿವುಡ್‌ನಲ್ಲೇ ಅಂತೆ ! ಎಂಬಲ್ಲಿಗೆ, ಕನ್ನಡದ ಇನ್ನೊಂದು ಬಿಂದಾಸ್‌ ಹುಡುಗಿಯನ್ನು ಸ್ಯಾಂಡಲ್‌ವುಡ್‌ನೋರು ಪೂರ್ತಿ ಮರೆಯಬೇಕು. ಅಥವಾ ಟಾಲಿವುಡ್ಡಲ್ಲಿ ಸೋತು ಸುಣ್ಣವಾಗಿ ರೇಖಾ ಕನ್ನಡ ಸಿನಿಮಾಗೆ ಮರು ಪ್ರವೇಶಿಸಬೇಕು !

'ಒಕಟೋ ನಂಬರ್‌ ಕುರ್ರಾಡು" ರೇಖಾ ಅಭಿನಯದ ಲೇಟೆಸ್ಟ್‌ ತೆಲುಗು ಚಿತ್ರ. ಫಸ್ಟ್‌ ರಿಯಾಕ್ಷನ್‌ ಗಿಟ್ಟುವಂತೆ ಕಾಣುತ್ತಿರುವುದರಿಂದ ರೇಖಾ ಒಂಬತ್ತನೇ ಮೋಡದ ಮೇಲೆ ತೇಲುತ್ತಿದ್ದಾಳೆ. ಮೊನ್ನೆ ತೆಲುಗು ದೇಶದಲ್ಲೇ ಸಿಕ್ಕಿ, ತೊದಲು ಕನ್ನಡದಲ್ಲಿ ನಮ್ಮ ಜೊತೆ ಮಾತಿಗೆ ಶುರುವಿಟ್ಟಳು...

ಐಶ್ವರ್ಯ ರೈ ಜೊತೆ ನಿಮ್ಮನ್ನ ಹೋಲಿಸುತ್ತಿರುವುದಕ್ಕೆ ಏನನ್ನಿಸುತ್ತೆ?
ಯೀ... ಅದೇನೋ ಬಹಳ ಜನ ನೀನು ಐಶ್ವರ್ಯ ಥರಾ ಇದಿಯಾ ಅಂತಾರೆ. ಐಶ್ವರ್ಯಾ ರೈಗೆ ಮಿಸ್‌ ವರ್ಲ್ಡ್‌ ಕಿರೀಟ ತೊಡಿಸಿದಾಗ ನಾನಿನ್ನೂ ಸ್ಕೂಲ್‌ ಗರ್ಲ್‌. ನನ್ನ ಕ್ಲಾಸ್‌ಮೇಟ್ಸ್‌ ಆಗಲೇ ನನಗೆ, ನೀನು ಐಶ್ವರ್ಯ ರೈ ಥರ ಇದಿಯಾ ಅಂತಿದ್ರು. ಆದ್ರೂ ನನಗೆ ರೇಖಾ ಅಂತ ಕರೆಸಿಕೊಳ್ಳೋದೇ ಇಷ್ಟ :)

ಸಿನಿಮಾಗೆ ಬರದೇ ಇದ್ರೆ ನೀವೇನಾಗ್ತಿದ್ರಿ?
ಬಿಸಿನೆಸ್‌ ಮಾಡ್ತಿದ್ದೆ. ನಮ್ಮಪ್ಪಂದು ಸಾಫ್ಟ್‌ವೇರ್‌ ಬಿಸಿನೆಸ್ಸಿದೆ. ಇಂಡಸ್ತ್ರಿಯಲಿಸ್ಟ್‌ ಆಗಿ ಹೆಸರು ಮಾಡಬೇಕು ಅನ್ನೋದು ಮುಂಚಿನಿಂದಲೂ ನನ್ನ ಕನಸು. ಈಗ ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌ನಲ್ಲಿ ಕರೆಸ್ಪಾಂಡೆನ್ಸ್‌ ಕೋರ್ಸ್‌ ಮಾಡ್ತಿದೀನಿ.

ನೀವು ಎಂಥಾ ಪಾತ್ರ ಮಾಡೋಕೆ ಇಷ್ಟ ಪಡ್ತೀರಾ?
ಇಂಥದ್ದೇ ಅಂತೇನೂ ಇಲ್ಲ. ಗ್ಲ್ಯಾಮರ್‌ ಮತ್ತು ನಟನೆ- ಎರಡಕ್ಕೂ ಪ್ರಾಮುಖ್ಯತೆ ಇರುವ ಪಾತ್ರ ಆಗಿದ್ದರೆ ಚೆನ್ನ.

ಎಕ್ಸ್‌ಪೋಸ್‌ ಮಾಡೋಕೆ ನೀವು ಸಿದ್ಧವಾ?
ಲೆಟೆಸ್ಟ್‌ ಟ್ರೆಂಡಿನ ಬಟ್ಟೆ ಹಾಕೋಕೆ ನೋ ಅಬ್ಜೆಕ್ಷನ್‌. ಆಯಾ ಪಾತ್ರಕ್ಕೆ ತಕ್ಕಂತೆ ಬಟ್ಟೆ ಹಾಕಬೇಕಾಗುತ್ತೆ. ಈ ವಿಷಯದಲ್ಲಿ ಸಂಪ್ರದಾಯವಾದಿಗಳಾಗಿ ಇರೋಕೆ ಸಾಧ್ಯವಿಲ್ಲ. ಇಷ್ಟು ಮಾತ್ರ ಹೇಳಬಲ್ಲೆ :)

ನೀವು ಕನ್ನಡ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದೀರಿ? ಯಾವ ಭಾಷೆಯ ಚಿತ್ರಗಳಲ್ಲಿ ಹೆಚ್ಚು ಕಾಲ ನಟಿಸಬೇಕು ಅಂತಿದೀರಿ?
ಡೆಫಿನೇಟ್‌ ಆಗಿ ಹೆಚ್ಚು ತೆಲುಗು ಚಿತ್ರಗಳಲ್ಲಿ ನಟಿಸಬೇಕು ಅಂದ್ಕೊಂಡಿದೀನಿ. ಸೌಂದರ್ಯ ಮತ್ತು ಸಾಂಘವಿ ಕನ್ನಡದಿಂದ ಇಲ್ಲಿಗೆ ಬಂದು ಸಾಕಷ್ಟು ಹೆಸರು ಮಾಡಿದ್ದಾರಲ್ಲಾ, ಆ ಥರ ಆಗೋ ಆಸೆ ಇದೆ. ಪಾತ್ರದ ಆಯ್ಕೆಯಲ್ಲಿ ನಾನು ಕತೆಗೆ ಹೆಚ್ಚು ಒತ್ತು ಕೊಡ್ತೀನಿ. ತೆಲುಗು ಸಿನಿಮಾದಲ್ಲಿ ಮನೆಯಲ್ಲಿರುವ ಭಾವನೆ ಮೂಡುತ್ತೆ. ಇಲ್ಲಿ ಎಲ್ಲರೂ ನನ್ನ ಕಡೆ ಚೆನ್ನಾಗಿ ಗಮನ ಹರಿಸುತ್ತಾರೆ.

ನಿಮ್ಮ ಕಾಂಪಿಟಿಟರ್‌ ಯಾರು?
ನನ್ನ ಸ್ಪರ್ಧಿ ನಾನೇ ! ಹಾಗಂದುಕೊಂಡಾಗ ಮಾತ್ರ ಮೇಲೆ ಬರೋಕೆ ಸಾಧ್ಯ.

ಪರ್ಸನಲ್‌ ಲೈಫ್‌ ಬಗ್ಗೆ ಏನಾದ್ರೂ ಹೇಳಿ?
ಹೇಳೋಕೆ ಅಂಥಾದ್ದೇನೂ ಇಲ್ಲ. ಏನಾದ್ರೂ ಇದ್ರೆ ಖಂಡಿತ ನಿಮಗೆ ಹೇಳ್ತೇನೆ :)

ಯಾವ ನಟ- ನಟಿಯರ ಜೊತೆ ನಟಿಸೋದು ನಿಮಗಿಷ್ಟ ?

ತೆಲುಗುನಲ್ಲಿ ಚಿರಂಜೀವಿ, ಹಿಂದಿಯಲ್ಲಿ ಶಾರುಖ್‌ ಖಾನ್‌. ಹೀರೋಯಿನ್ಸ್‌ ಪೈಕಿ ನನಗೆ ಶ್ರೀದೇವಿ, ಕಾಜೋಲ್‌ ಅಂದ್ರೆ ತುಂಬಾ ಇಷ್ಟ. ಫಿಜಾ ಚಿತ್ರದಲ್ಲಿ ಕರಿಷ್ಮಾ ಕಪೂರ್‌ ಕೂಡ ತುಂಬಾ ಹಿಡಿಸಿದರು. ಆ ಚಿತ್ರದಲ್ಲಿ ಅವರು ಮಾಡಿದಂಥಾ ಪಾತ್ರ ಮಾಡಬೇಕು ಅನ್ನೋದು ನನ್ನ ಕನಸು.Post your Views

English summary
An interview with Rekha

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada