For Quick Alerts
  ALLOW NOTIFICATIONS  
  For Daily Alerts

  ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ‘ನಾಯಿ ನೆರಳು’

  By Staff
  |

  ನವದೆಹಲಿ : 37ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ನಾಯಿ ನೆರಳು’ ಚಿತ್ರ ಆಯ್ಕೆಗೊಂಡಿದೆ. ಗೋವಾದಲ್ಲಿ ನ.23ರಿಂದ ಚಿತ್ರೋತ್ಸವ ಆರಂಭಗೊಳ್ಳಲಿದೆ.

  ಭಾರತೀಯ ಪನೋರಮಾ ವಿಭಾಗದಲ್ಲಿ ಆಯ್ಕೆಯಾದ 20ಚಿತ್ರಗಳಲ್ಲಿ ‘ನಾಯಿ ನೆರಳು’ ಸಹಾ ಒಂದು. ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಕನ್ನಡ ಸೇರಿದಂತೆ ಇನ್ನಿತರ ಭಾಷೆಯ ಅನೇಕ ಚಿತ್ರಗಳು ಪೈಪೋಟಿ ನಡೆಸಿದ್ದವು. ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಬಾಲಿವುಡ್‌ ನಟ ಶಶಿಕಪೂರ್‌ ಉದ್ಘಾಟಿಸಲಿದ್ದಾರೆ.

  ಎಸ್‌.ಎಲ್‌.ಭೈರಪ್ಪ ಅವರ ಕಾದಂಬರಿ ಆಧಾರಿತ ಈ ಚಿತ್ರದ ಮುಖ್ಯಪಾತ್ರದಲ್ಲಿ ಪವಿತ್ರ ಲೋಕೇಶ್‌(ಅವರಿಗೆ ಕರ್ನಾಟಕ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ) ನಟಿಸಿದ್ದಾರೆ.

  (ಏಜನ್ಸೀಸ್‌)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X